ಮಡಿಕೇರಿ ಜ.2 : ಅಗ್ನಿ ಆಕಸ್ಮಿಕದಿಂದ ರಬ್ಬರ್ ಹಾಳೆಗಳು ಬೆಂಕಿಗಾಹುತಿಯಾದ ಘಟನೆ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ಕೃಷಿಕ ಸೂರಜ್ ಹೊಸೂರು ಎಂಬುವವರ ಮನೆಯಲ್ಲಿ ರಬ್ಬರ್ ಹಾಳೆಗಳ ದಾಸ್ತಾನು ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು ಈ ಅನಾಹುತ ಸಂಭಿಸಿದೆ. ಒಂದೂವರೆ ಲಕ್ಷ ರೂ. ಗೂ ಅಧಿಕ ಮೌಲ್ಯದ ರಬ್ಬರ್ ಹಾಳೆಗಳು ಸುಟ್ಟು ಕರಕಲಾಗಿದ್ದು, ಯಂತ್ರಗಳಿಗೂ ಹಾನಿಯಾಗಿದೆ. ಪೊಲೀಸರು ಹಾಗೂ ಸಂಬAಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.












