ನಾಪೋಕ್ಲು ಜ.4 : ಹದಿ ಹರೆಯದವರು ಯಾವುದೇ ಆಕರ್ಷಣೆಗಳಿಗೆ ಬಲಿಯಾಗದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಏಡ್ಸ್ ನಿಯಂತ್ರಣ ಘಟಕದ ಸೂಪರಿಡೆಂಟ್ ಸುನೀತಾ ಹೇಳಿದರು.
ಮೂರ್ನಾಡಿನ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹೆಚ್ಐವಿ ಹರಡುವಿಕೆ ಹಾಗೂ ಏಡ್ಸ್ ಜಾಗೃತಿ ಕುರಿತು ಮಾತನಾಡಿದ ಅವರು ಏಡ್ಸ್ ನಿಯಂತ್ರಣ ಕ್ರಮಗಳ ಬಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಕಿ, ರಾಷ್ಟೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ದಮಯಂತಿ, ಉಪನ್ಯಾಸಕರಾದ ಕಲಾವತಿ, ಉಷಾ, ರಶ್ಮಿ ಉಪಸ್ಥಿತರಿದ್ದರು.
ವರದಿ -ದುಗ್ಗಳ ಸದಾನಂದ