ಸೋಮವಾರಪೇಟೆ ಜ.4 : ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ಗೆ ಆಯ್ಕೆಯಾದ ಹಿನ್ನೆಲೆ ವಿದ್ಯಾರ್ಥಿನಿ ಹಾನಗಲ್ ಗ್ರಾಮದ ಸ್ನೇಹಾಳಿಗೆ ಸೋಮವಾರಪೇಟೆ ಜೇಸಿ ಸಂಸ್ಥೆಯಿಂದ ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಲಾಯಿತು.
ಜ.8 ರಂದು ಅಸ್ಸಾಂನ ಕಾಮರೂಪ್ನಲ್ಲಿ ನಡೆಯಲಿರುವ 57ನೇ ನ್ಯಾಷನಲ್ ಕ್ರಾಸ್ ಕಂಟ್ರಿ ಅಥ್ಲೆಟಿಕ್ಸ್ ಚಾಂಪಿಯನ್ಶಿಫ್ಗೆ ಆಯ್ಕೆಯಾಗಿದ್ದಾರೆ.
ಜೇಸಿ ಅಧ್ಯಕ್ಷೆ ಎಂ.ಎ.ರುಬಿನಾ, ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರ ಲಕ್ಷ್ಮೀ ಕುಮಾರ್, ಜೂನಿಯರ್ ಜೇಸಿ ಚೇರ್ ಪರ್ಸನ್ ರಿಶಾ ಪ್ರಮುಖರಾದ ಮಾಯಾ ಗಿರೀಶ್, ಕೆ.ಎ. ಪ್ರಕಾಶ್, ಪುರುಷೋತ್ತಮ್ , ನಾಗರಾಜು, ಪೃಥ್ವಿ ಗೌಡ, ಸ್ನೇಹ ಪೋಷಕರಾದ ಮಹೇಶ್ ಮಂಜುಳಾ ಮತ್ತು ಜೇಸಿ ಪದಾಧಿಕಾರಿಗಳು ಇದ್ದರು.