ಮಡಿಕೇರಿ ಜ.5 : ರೋಟರಿ ಮಡಿಕೇರಿ ವುಡ್ಸ್ ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ಆರಂಭಿಕ ವರ್ಷವೇ ಸಾಧನೆಯ ಹೆಗ್ಗುರುತುಗಳನ್ನು ಸೃಷ್ಟಿಸಿದೆ ಎಂದು ರೋಟರಿ ವುಡ್ಸ್‍ನ 3181 ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ಮೂರನೇ ರೋಟರಿ ಸಂಸ್ಥೆಯಾಗಿ 2022ರ ಮೇ 15 ರಂದು ಉದಯಿಸಿದ ರೋಟರಿ ಮಡಿಕೇರಿ ವುಡ್ಸ್ 35 ಸದಸ್ಯರ ತಂಡಗಳನ್ನೊಳಗೊಂಡು ಸಾಕಷ್ಟು ಜನೋಪಯೋಗಿ ಕಾರ್ಯ ಯೋಜನೆಗಳ ಮೂಲಕ ಜನಸ್ನೇಹಿಯಾಗಿದೆ. ಮುಂದಿನ ವರ್ಷಗಳಲ್ಲಿಯೂ ಮತ್ತಷ್ಟು ಸಾಮಾಜಿಕ ಕಳಕಳಿಯ ಯೋಜನೆಗಳಲ್ಲಿ ಸಕ್ರಿಯವಾಗಲಿದೆ ಎಂದರು.
ರೋಟರಿ ವುಡ್ಸ್ ಸಂಸ್ಥೆ ಶುದ್ಧ ಕುಡಿಯುವ ನೀರು, ಜನರಿಗೆ ಸೂರು, ಶಿಕ್ಷಣ, ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದ ಜೆನಿಫರ್ ಜಾನ್ ಅವರ ಆಶಯದಂತೆ ಶಿಕ್ಷಣ ಮತ್ತು ಪರಿಸರಕ್ಕೆ ಪೂರಕವಾದ ವನಸಿರಿ, ವಿದ್ಯಾಸಿರಿ, ಆರೋಗ್ಯ ಸಿರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ಲಬ್ ಸರ್ವಿಸ್, ಜನರನ್ನು ಬಲಪಡಿಸುವ ನಿಟ್ಟಿನಲ್ಲಿ ಕಮ್ಯೂನಿಟಿ ಸರ್ವಿಸ್, ಯುವಕರನ್ನು ಬಲಪಡಿಸುವ ನಿಟ್ಟಿನಲ್ಲಿ ಯೂತ್ ಸರ್ವಿಸ್, ರಾಷ್ಟ್ರವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸೇವೆಗಳನ್ನು ನಡೆಸಿಕೊಂಡು ಬರುತ್ತಿದೆ. ವಿಶ್ವದಾದ್ಯಂತ ಪೊಲಿಯೋ ಹೊಡೆದೊಡಿಸುವಲ್ಲಿ ಯಶಸ್ವಿಯನ್ನು ಕಂಡಿದ್ದು, ರೋಟರಿ ದತ್ತಿನಿಧಿಯ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜ.27, 28 ಹಾಗೂ 29 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‍ನಲ್ಲಿ ಕಾನ್ಫರೆನ್ಸ್ ಕಾರ್ಯಕ್ರಮ ನಡೆಯಲಿದ್ದು, ಸುಮಾರು 2 ಸಾವಿರ ಕುಟುಂಬ ಭಾಗವಹಿಸಲಿದೆ. ಅಲ್ಲದೆ ಬೈಕ್‍ರೈಡರ್ಸ್ ಮೂಲಕ ಮಣ್ಣು, ಜಲದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಬೊಯಿಕೇರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ, ಬಾಳೆಲೆಯಲ್ಲಿ ವೈದ್ಯಕೀಯ ಶಿಬಿರ, ಜಂಬೂರುವಿನಲ್ಲಿ ಮುನ್ನೂರು ಮಂದಿಗೆ ರಾಷ್ಟ್ರ ಧ್ವಜ ನೀಡುವ ಮೂಲಕ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ, ಕ್ಲಬ್ ಸದಸ್ಯರೂ ಸೇರಿದಂತೆ ಅನೇಕ ರೋಟರಿ ಸದಸ್ಯರಿಂದ ವಾರದ ಸಭೆಗಳಲ್ಲಿ ಮಾಹಿತಿಯುಕ್ತ ಉಪನ್ಯಾಸ ಕಾರ್ಯಕ್ರಮ ಆಯೋಜನೆ, ಮೂರ್ನಾಡು ಶಿಕ್ಷಣ ಸಂಸ್ಥೆಯಲ್ಲಿ ಸಸಿ ನೆಡುವಿಕೆ, ದಂತ ತಪಾಸಣ ಶಿಬಿರ, ರಕ್ತದಾನ ಶಿಬಿರ, ಮಡಿಕೇರಿ ಹೊರವಲಯದಲ್ಲಿ ಸ್ವಾಗತ ಫಲಕ ಅಳವಡಿಕೆ, ಪಲ್ಸ್ ಪೊಲಿಯೋ ನಿವಾರಣೆಯ ಮಹತ್ವ ಸಾರುವ ಫ್ಲೆಕ್ಸ್ ಅಳವಡಿಕೆ ಸೇರಿದಂತೆ ಹಲವು ಯೋಜನೆ ಜಾರಿಗೊಳಿಸಲಾಗಿದೆ. 28 ವಾರಗಳಲ್ಲಿ 32 ಪ್ರಮುಖ ಯೋಜನೆ ಕೈಗೊಂಡಿರುವುದು ವುಡ್ಸ್‍ನ ಸಾಧನೆಯಾಗದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಯೋಜನೆಯಲ್ಲಿ ಸಕ್ರಿಯವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ವಲಯ 6ರ ಸಹಾಯಕ ಗವರ್ನಲ್ ರತನ್ ತಮ್ಮಯ್ಯ ಹಾಗೂ ಮಡಿಕೇರಿ ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ ಕುಮಾರ್ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*