ಮಡಿಕೇರಿ ಜ.5 : ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಪ್ಲೆಕ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಸಹಯೋಗದಲ್ಲಿ ಜ.6 ರಂದು ಕುಶಾಲನಗರದಲ್ಲಿ ಹೃದ್ರೋಗ ತಪಾಸಣಾ ಶಿಬಿರ ನಡೆಯಲಿದೆ.
ನಾರಾಯಣ ಸೂಪರ್ಸ್ಪೆಷಾಲಿಟಿ ಒಪಿಡಿ ಸೆಂಟರ್ನಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ರವಿಶಂಕರ್ ಎದೆನೋವು, ಎದೆಯ ಬಿಗಿತ, ಎದೆಯ ಒತ್ತಡ ಮತ್ತು ಎದೆಯ ಅಸ್ವಸ್ಥತೆ, ಉಸಿರಾಟದ ತೊಂದರೆ, ವೇಗವಾದ ಹೃದಯ ಬಡಿತಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಲಿದ್ದಾರೆ.
ನೋಂದಣಿಗಾಗಿ 9513408004, 8904258788, 08276273221 ಸಂಪರ್ಕಿಸಬಹುದಾಗಿದೆ.