ಮಡಿಕೇರಿ ಜ.10 : ಮೈಸೂರಿನ ನಾರಾಯಣ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಜ.13 ರಂದು ಮಡಿಕೇರಿ, ವಿರಾಪೇಟೆಯಲ್ಲಿ ಹಾಗೂ ಕುಶಾಲನಗರದಲ್ಲಿ ಲ್ಯಾಪರೋಸ್ಕೋಪಿಕ್ ಮತ್ತು ಜೀರ್ಣಾಂಗ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಯಲಿದೆ.
ಕುಶಾಲನಗರದ ಮೆಡಿಪ್ಲೆಕ್ಸ್ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆವರೆಗೆ, ಮಡಿಕೇರಿಯ ರವಿ ಆರ್ಥೋಪೆಡಿಕ್ ಸೆಂಟರ್ನಲ್ಲಿ 11.30 ರಿಂದ ಮಧ್ಯಾಹ್ನ 12.30ರ ವರೆಗೆ, ವಿರಾಜಪೇಟೆಯ ಮಗ್ಗುಲ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಸೆಂಟರ್ನಲ್ಲಿ ಮಧ್ಯಾಹ್ನ 1.30 ರಿಂದ ಮಧ್ಯಾಹ್ನ 2.30ರ ವರೆಗೆ ಲ್ಯಾಪರೋಸ್ಕೋಪಿಕ್ ಮತ್ತು ಗ್ಯಾಸ್ಟ್ರೋ ಆಂಕೋ ಶಸ್ತ್ರಚಿಕಿತ್ಸಕ ಡಾ.ಎಚ್.ಎಂ.ಲೋಕೇಶ್ ತಪಾಸಣೆ ನಡೆಸಲಿದ್ದಾರೆ.
ಶಿಬಿರದಲ್ಲಿ ಲ್ಯಾಪರೋಸ್ಕೋಪಿಕ್ ಸರ್ಜರಿ, ಪಿತ್ತಕೋಶದ ಕಲ್ಲುಗಳು, ಹರ್ನಿಯಾ, ಅಪೆಂಡಿಸೈಟಿಸ್, ಜೀರ್ಣಾಂಗ ಕ್ಯಾನ್ಸರ್, ಗ್ಯಾಸ್ಟ್ರೈಟಿಸ್, ಹೊಟ್ಟೆ, ಕರುಳು, ಲಿವರ್ ಮತ್ತು ಪ್ಯಾಂಕ್ರಿಯಾಸ್ ಕಾಯಿಲೆಗಳು, ಬೊಜ್ಜುತನಕ್ಕೆ ಚಿಕಿತ್ಸೆ ನೀಡಲಾಗುವುದು.
ನೋಂದಣಿಗಾಗಿ 8884458890, 9513408004, 8277468176 ಸಂಪರ್ಕಿಸಬಹುದಾಗಿದೆ.