ಮಡಿಕೇರಿ ಜ.11 : ಮಡಿಕೇರಿ ತಾಲ್ಲೂಕಿನ ಕುರುಳಿ ಗ್ರಾಮದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಚರಣೆ ನಡೆಸಿದರು. ರೂ. 61,600/- ಗಳನ್ನು ದಂಡ ವಿಧಿಸಲಾಗಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಕಬ್ಬಿಣದ ತೆಪ್ಪ ನಾಪೋಕ್ಲು ಪೊಲೀಸ್ ಠಾಣೆಯ ವಶದಲ್ಲಿದೆ.











