ಮಡಿಕೇರಿ ಜ.12 : ಮಡಿಕೇರಿ ನಗರದ 23 ವಾರ್ಡ್‍ಗಳ ಜನರ ಸಮಸ್ಯೆಗಳನ್ನು ಆಲಿಸುವ ಒಂದು ತಿಂಗಳ ಅಭಿಯಾನಕ್ಕೆ ಕೊಡಗು ರಕ್ಷಣಾ ವೇದಿಕೆ ಚಾಲನೆ ನೀಡಿದೆ.
ನಗರದ ಮಲ್ಲಿಕಾರ್ಜುನ ನಗರ ಬಡಾವಣೆಯಿಂದ ಅಭಿಯಾನವನ್ನು ಆರಂಭಿಸಿದ ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಅವರ ನೇತೃತ್ವದ ತಂಡ ಮೂಲಭೂತ ಸೌಲಭ್ಯಗಳ ಕೊರತೆಯ ಕುರಿತು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ಸಂಗ್ರಹಿಸಿತು.
ನಗರಸಭಾ ವ್ಯಾಪ್ತಿಯ 23 ವಾರ್ಡ್‍ಗಳ 11 ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ಆಡಳಿತ ವ್ಯವಸ್ಥೆಯ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದೇ ಒಂದು ತಿಂಗಳ ಅಭಿಯಾನದ ಉದ್ದೇಶವಾಗಿದೆ ಎಂದು ಪವನ್ ಪೆಮ್ಮಯ್ಯ ಈ ಸಂದರ್ಭ ತಿಳಿಸಿದರು.
ಕೊರವೇ ಮಡಿಕೇರಿ ನಗರ ಘಟಕದ ಅಧ್ಯಕ್ಷ ಶರತ್, ಉಪಾಧ್ಯಕ್ಷ ವರ್ಗೀಸ್, ಪ್ರಧಾನ ಕಾರ್ಯದರ್ಶಿ ಬನ್ಸಿ ನಾಣಯ್ಯ, ಖಜಾಂಚಿ ಸಿದ್ದಿಕ್, ಜಿಲ್ಲಾ ನಿರ್ದೇಶಕ ಸುಲೇಮಾನ್, ಪ್ರಮುಖರಾದ ಮುದ್ದುರ ನಿತಿನ್ ದೇವಯ್ಯ ಮತ್ತಿತರರು ಹಾಜರಿದ್ದರು.