ಮಡಿಕೇರಿ ಜ.14 : ಶಬರಿಮಲೆಗೆ ತೆರಳಿದ್ದ ಮಡಿಕೇರಿ ನಗರದ ಯುವಕನೊಬ್ಬ ಮರಳುವ ಸಂದರ್ಭ ಸಮುದ್ರದಲೆಗೆ ಸಿಲುಕಿ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರ್ ಬೀಚ್ ನಲ್ಲಿ ನಡೆದಿದೆ.
ನಗರದ ಸುದರ್ಶನ ಬಡಾವಣೆ ನಿವಾಸಿ ಲೋಕೇಶ್ ಎಂಬುವವರ ಪುತ್ರ ಶಶಾಂಕ್ (25) ಮೃತ ದುರ್ದೈವಿ. ಶಬರಿಮಲೆಯಿಂದ ಮರಳುವಾಗ ಯುವಕರ ತಂಡ ಕೇರಳದ ಕಣ್ಣೂರ್ ಬೀಚ್ ಗೆ ಭೇಟಿ ನೀಡಿತ್ತು. ಈ ಸಂದರ್ಭ ಇವರುಗಳು ಅಲೆಗಳಿಗೆ ಸಿಲುಕಿಕೊಂಡರು ಎಂದು ಹೇಳಲಾಗಿದೆ. ರಕ್ಷಿಸುವ ಪ್ರಯತ್ನ ಮಾಡಲಾಯಿತ್ತಾದರೂ ಶಶಾಂಕ್ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.
ಮೃತ ಯುವಕ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.