ಮಡಿಕೇರಿ ಜ.16 : ಏಜೆಂಟ್ ಒಬ್ಬ ಮಾಡಿದ ವಂಚನೆಯಿoದ ಕೆಲಸವಿಲ್ಲದೆ ಕುವೈತ್ ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಸಿದ್ದಾಪುರದ ಕರಡಿಗೋಡು ಗ್ರಾಮದ ಮಹಿಳೆ ಪಾರ್ವತಿ ಎಂಬುವವರ ರಕ್ಷಣೆಗೆ ಕೊಡಗು ಜಿಲ್ಲಾಡಳಿತ ಮುಂದಾಗಿದೆ.
ವಿಸಿಟಿoಗ್ ವೀಸಾದ ಅವಧಿ ಮೂರು ತಿಂಗಳಿಗೆ ಮುಕ್ತಾಯವಾದ ಹಿನ್ನೆಲೆ ಇದರ ಅರಿವಿಲ್ಲದ ಪಾರ್ವತಿ ಇದೀಗ ಕೆಲಸವಿಲ್ಲದೆ ಯಾವುದೋ ಒಂದು ಸ್ಥಳದಲ್ಲಿ ಅತಂತ್ರವಾಗಿರುವ ಬಗ್ಗೆ ಕಳೆದ ವಾರ ತನ್ನ ತಾಯಿ ಎಂ.ಚೆಕ್ಕಿ ಅವರಿಗೆ ಕರೆ ಮಾಡಿ ತಿಳಿಸಿದ್ದರು.
ಇದರಿಂದ ಆತಂಕಗೊoಡ ಚೆಕ್ಕಿ ಪುತ್ರಿಯನ್ನು ಮರಳಿ ಕರೆ ತರಲು ಸಹಾಯ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ ಪಾರ್ವತಿಯನ್ನು ಕರೆ ತರಲು ಅಗತ್ಯ ಕ್ರಮ ಕೈಗೊಂಡಿದೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಸಂತ್ರಸ್ತೆಯೊoದಿಗೆ ಸಂವಹನ ಸಾಧಿಸಿ, ಆಕೆಗೆ ಧೈರ್ಯ ತುಂಬಿ ಸಂಬoಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಾರ್ವತಿಯನ್ನು ಕ್ಷೇಮವಾಗಿ ಕುಟುಂಬದೊಡನೆ ಸೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
::: ವಂಚಿಸಿದ ಏಜೆಂಟ್ :::
ಪತಿ ತೊರೆದು ಹೋದ ಹಿನ್ನೆಲೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಹಾಗೂ ತಾಯಿಯೊಂದಿಗೆ ಕರಡಿಗೋಡು ಗ್ರಾಮದ ಲೈನ್ ಮನೆಯೊಂದರಲ್ಲಿ ವಾಸವಿದ್ದ ಪಾರ್ವತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಕೇರಳದ ತಲಚೇರಿಯ ಮನೆಯೊಂದರಲ್ಲಿ ಮನೆ ಕೆಲಸಕ್ಕಾಗಿ ಪಾರ್ವತಿ ನೇಮಕಗೊಂಡಿದ್ದರು. ತಾಯಿ ಚೆಕ್ಕಿಯೊಂದಿಗೆ ಇಬ್ಬರು ಮಕ್ಕಳನ್ನು ಬಿಟ್ಟು ತೆರಳಿದ್ದರು.
ಇತ್ತೀಚೆಗೆ ಮಹಿಳೆಯೊಬ್ಬಳ ಮೂಲಕ ಊಟಿಯ ಏಜೆಂಟ್ ಒಬ್ಬನ ಪರಿಚಯವಾಗಿದ್ದು, ಕುವೈತ್ ನಲ್ಲಿ ಮನೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಏಜೆಂಟ್ ನೀಡಿದ ಪಾಸ್ ಪೋರ್ಟ್ ಮತ್ತು ವೀಸಾದ ಮೂಲಕ ಕುವೈತ್ ನ ಮನೆಯೊಂದಕ್ಕೆ ಸೇರಿಕೊಂಡ ಪಾರ್ವತಿ ಮೂರು ತಿಂಗಳಿನಿAದ ಮನೆ ಕೆಲಸದಾಕೆಯಾಗಿ ದುಡಿಯುತ್ತಿದ್ದರು. ಆದರೆ ವೀಸಾದ ಅವಧಿ ಮುಗಿಯುತ್ತಿದ್ದಂತೆ ಕೆಲಸ ಕಳೆದುಕೊಂಡ ಅವರು ಅತಂತ್ರರಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ.
ವಿಸಿಟಿಂಗ್ ವೀಸಾದ ಅವಧಿಯ ಕುರಿತು ತಿಳಿಸದೆ ವಂಚಿಸಿರುವ ಏಜೆಂಟ್ ಪಾರ್ವತಿಯನ್ನು ಕೆಲಸಕ್ಕೆ ಸೇರಿಸಿದ ಮನೆಯ ಮಾಲೀಕರಿಂದ ಹಣ ಪಡೆದಿದ್ದಾನೆ ಎಂದು ತಿಳಿದು ಬಂದಿದೆ.















