ವಿರಾಜಪೇಟೆ ಜ.17 ಕೊಡಗಿನಾದ್ಯಂತ ಘಂಟೆ ಕಳ್ಳತನ ಮಾಡುವುದರ ಮೂಲಕ ದೇವಸ್ಥಾನಗಳಲ್ಲಿ ಘಂಟೆಯ ಸದ್ದು ಕೇಳದಂತೆ ಮಾಡಿದ ಘಂಟೆ ಕಳ್ಳರನ್ನು ಹಿಡಿದು ಎಡೆಮುರಿ ಕಟ್ಟಿದ ಪೊಲೀಸರು ಆರೋಪಿಗಳನ್ನು ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭದ್ರತೆಯೊಂದಿಗೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಲಾಯಿತು.
ದೇವರ ಶಕ್ತಿ ಎಂಬಂತೆ ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನದ ಘಂಟೆ ಕಳ್ಳತನವೇ ಜಿಲ್ಲೆಯ ಕೊನೆಯ ಕಳ್ಳತನವಾಗಿತ್ತು ಎನ್ನುವುದು ಗಮನಾರ್ಹ. ಇದಕ್ಕೂ ಮುಂಚೆ ಕೂಡ ಹಲವಾರು ಕಡೆ ಹುಂಡಿ ಕಳ್ಳತನ ಮಾಡಿದ ಕಳ್ಳರು ಇದೇ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ಮಾಡಲು ಪ್ರಯತ್ನಿಸಿ ವಿಫಲರಾಗಿ 24 ಗಂಟೆಯೊಳಗೆ ತಾವಾಗಿಯೇ ಪೊಲೀಸ್ ಠಾಣೆಗೆ ಹೋಗಿ ಸಿಕ್ಕಿಹಾಕಿಕೊಂಡಿದ್ದು ವಿಶೇಷ.















