ಕುಶಾಲನಗರ ಜ.17 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಕುಶಾಲನಗರದ ಬ್ಯಾಂಕ್ ಆಫ್ ಬರೋಡ ಸಂಯುಕ್ತಾಶ್ರಯದಲ್ಲಿ ಕುಶಾಲನಗರದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಅಭಾಕಾರ್ಡ್ ನೊಂದಣಿ ಕಾರ್ಯಕ್ರಮ ನಡೆಯಿತು.
ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಶಿಬಿರವನ್ನು ಚೇಂಬರ್ ಆಫ್‍ಕಾಮರ್ಸ್ ಅಧ್ಯಕ್ಷ ಅಮೃತ್‍ರಾಜ್ ಉದ್ಘಾಟಿಸಿದರು.
ಶಿಬಿರದಲ್ಲಿ ರಕ್ತದೊತ್ತಡ, ಡಯಾಬಿಟಿಸ್, ಮತ್ತಿತರ ಸಣ್ಣಪುಟ್ಟ ಕಾಯಿಲೆಗಳ ಬಗ್ಗೆ ಪರೀಕ್ಷೆ ನಡೆದುಚಿಕಿತ್ಸೆ ನೀಡಲಾಯಿತು. ಪಿಎಂಜೆವೈ, ಅಭಾಕಾರ್ಡ್ ನೊಂದಣಿಕಾರ್ಯ ಹಮ್ಮಿಕೊಳ್ಳಲಾಯಿತು.
ತಾಲೂಕು ಆರೋಗ್ಯ ಅಧಿಕಾರಿ ಶಾಂತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಪ್ರಯೋಜನವನ್ನು ಪಡೆಯುವ ಮೂಲಕ ತಮ್ಮ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಕೋರಿದರು.
ಈ ಸಂದರ್ಭ ಡಾ.ತೇಜಸ್ವಿನಿ, ಡಾ. ನಿಜಾಮುದ್ದಿನ್, ಡಾ.ನಂದಿನಿ, ಬ್ಯಾಂಕ್‍ಆಫ್ ಬರೋಡ ವ್ಯವಸ್ಥಾಪಕರಾದ ಸತೀಶ್, ಅಶೋಕ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ರಾಣಿ ಇದ್ದರು.















