ಮಡಿಕೇರಿ ಜ.19 : ತನ್ನ ಕಿರಿಯ ವಯಸ್ಸಿನಲ್ಲಿ ಸಾಧನೆಯ ಹಾದಿ ಹಿಡಿದಿರುವ ಪುಟಾಣಿ ದೀಕ್ಷಾ ಹಲವಾರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಈಕೆ ಕೂರ್ಗ್ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‍ನ ನೃತ್ಯ ಸ್ಪರ್ಧೆಯಲ್ಲಿ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಪ್ರಥಮ ಬಹುಮಾನ, ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿ ಆಯೋಜಿಸಿದ ಛದ್ಮವೇಶ ಸ್ಪರ್ಧೆಯಲ್ಲಿ ತೃತೀಯ ಹಾಗೂ ಕೊಡಗು ಜಿಲ್ಲಾ ಘಟಕ ಆಯೋಜಿಸಿದ ಸಮರ್ಥ ಕನ್ನಡಿಗರು ಕನ್ನಡ ಹಬ್ಬದ ಛದ್ಮವೇಶ ಸ್ಪರ್ಧೆಯಲ್ಲಿ ಪ್ರಥಮ, ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿರುವ ದೀಕ್ಷಾ, ಮುಳಿಯ ಜ್ಯುವೆಲರ್ಸ್ ಅವರು ಏರ್ಪಡಿಸಿದ ಛದ್ಮವೇಶ ಸ್ಪರ್ಧೆಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.
ಸೂಪರ್ ಕಿಡ್ಸ್ ಚಾನೆಲ್ – ವಾವ್ ಸಿನಿಮಾ ಚಾನೆಲ್ ಆಯೋಜಿಸಿದ ವಾವ್ ಕೊಡಗು ಟ್ಯಾಲೆಂಟ್ಸ್ ಚಾಂಪಿಯನ್ ಶಿಪ್‍ನಲ್ಲಿ ಕೊಡಗು ಟ್ಯಾಲೆಂಟ್ ಅವಾರ್ಡ್ ಪಡೆದಿರುತ್ತಾಳೆ. ಅಲ್ಲದೆ ಹಲವಾರು ವೇದಿಕೆಯಲ್ಲಿ ತನ್ನ ಪ್ರತಿಭೆಯನ್ನು ಹೊರಹೊಮ್ಮಿದ್ದಾಳೆ.
ಈಕೆ ಬಿಟ್ಟಂಗಾಲದ ನಿವಾಸಿಗಳಾದ ಕೆ.ಎ.ನವೀನ್ ಕುಮಾರ್- ಎ.ಎಸ್.ನಿತ್ಯ ದಂಪತಿಗಳ ಪುತ್ರಿಯಾಗಿದ್ದು, ಪ್ರಸ್ತುತ ವಿರಾಜಪೇಟೆಯ ಎಸ್.ಎಂ.ಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್‍ನಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತನ್ನ ನೃತ್ಯ ಹಾಗೂ ಸಂಗೀತ ಅಭ್ಯಾಸವನ್ನು ವಿರಾಜಪೇಟೆಯ ವಿದುಷಿ ಹೇಮಾವತಿ ಕಾಂತರಾಜ್ ಅವರ ನಾಟ್ಯಂಜಲಿ ನೃತ್ಯ ಮತ್ತು ಸಂಗೀತ ಶಾಲೆಯಲ್ಲಿ ಮಾಡುತ್ತಿದ್ದಾಳೆ.
ವರದಿ : ಬೊಳ್ಳಜಿರ ಬಿ.ಅಯ್ಯಪ್ಪ, ಮಡಿಕೇರಿ.