ಮಡಿಕೇರಿ ಜ.20 : ಕೊಡಗಿನ ಹೆಸರಾಂತ ಹಾಡುಗಾರ, ಕವಿ, ಸಮಾಜ ಸೇವಕರಾಗಿದ್ದ ದಿವಂಗತ ಮುಲ್ಲೇರ ಜಿಮ್ಮಿ ಐಯ್ಯಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಕೊಡವಾಮೆರ ಕೊಂಡಾಟ ಸಂಘಟನೆ ಆನ್ಲೈನ್ ಕವಿಗೋಷ್ಠಿಯನ್ನು ಏರ್ಪಡಿಸಿದೆ.
ಜ.31 ರಂದು ಸಂಜೆ 7 ಗೆ ಗೂಗಲ್ ಮೀಟ್ ವೆಬಿನಾರ್ನಲ್ಲಿ ನಡೆಯುವ ಕವಿಗೋಷ್ಠಿಗೆ, ಕವಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಕವನವು ಐಚ್ಛಿಕ ವಿಷಯಾಧಾರಿತ ಕೊಡವ ಭಾಷೆಯಲ್ಲಿರಬೇಕು, 24 ಗೆರೆಗಳು ಮೀರಬಾರದು, ಜಾತಿ, ಧರ್ಮ, ಲಿಂಗ, ವಯಸ್ಸಿನ ನಿರ್ಬಂಧ ವಿಲ್ಲದೆ ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ದಿನಾಂಕ 25/1/23ನೇ ಸಂಜೆಯ ಒಳಗಾಗಿ, ಕವಿಗೋಷ್ಠಿ ಸಂಚಾಲಕ ಶಿವಾಚಾಳಿಯಂಡ ಕಿಶೋರ್ ಬೋಪಣ್ಣ ಅವರ ಮೊಬೈಲ್ ಸಂಖ್ಯೆ 9449254349ಗೆ ವಾಟ್ಸಪ್ ಮಾಡುವುದರ ಮೂಲಕ ನೋಂದಾಯಿಸಿಕೊಳ್ಳಬಹುದು. ಕಾರ್ಯಕ್ರಮದಲ್ಲಿ ಕವನ ವಾಚಿಸುವ ಪ್ರತಿಯೊಬ್ಬರಿಗೂ ಆನ್ಲೈನ್ ಪ್ರಶಂಸಾ ಪತ್ರ ವಿತರಿಸಲಾಗುವುದು ಎಂದು ಸಂಘಟನೆಯ ಪ್ರಕಟಣೆ ಕೋರಿದೆ.