ಕುಶಾಲನಗರ ಜ.20 : ಕುಶಾಲನಗರದಲ್ಲಿ ಜ.21 ರಿಂದ 4 ದಿನಗಳ ಕಾಲ ನಡೆಯಲಿರುವ ಸಹರ ಕ್ರಿಕೆಟ್ ಕ್ಲಬ್‍ನ 2ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯಿತು.
ಐಶ್ವರ್ಯ ಪದವಿ ಪೂರ್ವಕಾಲೇಜಿನ ಸಂಸ್ಥಾಪಕ ಪುಲಿಯಂಡರಾವ್ ದೇವಯ್ಯ ಟ್ರೋಫಿ ಅನಾವರಣಗೊಳಿಸಿ ಪಂದ್ಯಾವಳಿಗೆ ಶುಭಕೋರಿದರು.
ಈ ಸಂದರ್ಭ ಕ್ರಿಕೆಟ್‍ಕ್ಲಬ್ ನ ಹೆಚ್.ಕೆ.ಸುಮೇರ್, ಉಪಾಧ್ಯಕ್ಷ ಅನ್ವರ್, ಕಾರ್ಯದರ್ಶಿ ಚಂದು, ಸಹಕಾರ್ಯದರ್ಶಿ ಅರಿಫ್, ಆಶಿಕ್, ಯೂನೋಸ್ ರಫೀಕ್ ಮತ್ತಿತರರು ಇದ್ದರು.







