ಸೋಮವಾರಪೇಟೆ ಜ.21 : ಗೌಡಳ್ಳಿಯಲ್ಲಿ ಫೆ.11 ರಂದು ನಡೆಯುವ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿಯನ್ನು ಗೌಡಳ್ಳಿಯ ಶ್ರೀ ನವದುರ್ಗಪರಮೇಶ್ವರಿ ದೇವಾಲಯದ ಆವರಣದಲ್ಲಿ ತೆರೆಯಲಾಯಿತು.
ಕ.ಸಾ.ಪ.ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಗೌಡಳ್ಳಿ ಗ್ರಾ.ಪಂ ಅಧ್ಯಕ್ಷ ಜಿ.ಜಿ.ಮಲ್ಲಿಕಾ, ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷ ಪಿ.ಕೆ.ರವಿ, ಕ.ಸಾ.ಪ ಕಾರ್ಯದರ್ಶಿ ಎ.ಪಿ.ವೀರರಾಜ್, ಪ್ರಮುಖರಾದ ಬಿ.ಬಿನಾಗರಾಜ್, ವೀರಭದ್ರಪ್ಪ, ಎಚ್.ಆರ್.ಮುತ್ತಣ್ಣ, ನವೀನ್ ಅಜ್ಜಳ್ಳಿ, ಸವಿನಾ ಮತ್ತಿತರರು ಇದ್ದರು.







