ಸುಂಟಿಕೊಪ್ಪ ಜ.22 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಾಕೂರು ಶಿರಂಗಾಲ ಕಾನ್‌ಬೈಲ್ ಶ್ರೀ ರಾಮಂದಿರ ದೇವಸ್ಥಾನ ಅಭಿವೃದ್ಧಿಗೆ ಅನುದಾನದ ಡಿ.ಡಿ ವಿತರಿಸಲಾಯಿತು.
ಶನಿವಾರಸಂತೆಯಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಧನಾ ಸಮಾವೇಶ ಸಮಾರಂಭದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ.ಶ್ರೀ. ಸದಾಶಿವ ಸ್ವಾಮಿಜಿ, ಮಡಿಕೇರಿ ಕ್ಷೇತ್ರ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಓ ಎಸ್.ಎಸ್. ಅನಿಲ್‌ಕುಮಾರ್, ಜಿಲ್ಲಾ ನಿರ್ದೇಶಕಿ ಲೀಲಾವತಿ ಮತ್ತು ತಾಲ್ಲೂಕು ಯೋಜನಾಧಿಕಾರಿ ರೋಹಿತ್ ಅವರುಗಳು ಕಾನ್‌ಬೈಲ್ ಶ್ರೀ ರಾಮಂದಿರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ನೀಡಲಾದ ರೂ. 1 ಲಕ್ಷ ಡಿ.ಡಿಯನ್ನು ದೇವಸ್ಥಾನ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.








