ಮಡಿಕೇರಿ ಜ.23 : ಇಂಡಿಯನ್ ರಿಪೋರ್ಟರ್ಸ್ ಅಂಡ್ ಮೀಡಿಯಾ ಪರ್ಸನ್ಸ್ ಯೂನಿಯನ್ ಹೆಸರಿನ ಪತ್ರಕರ್ತರ ಸಂಘಟನೆ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕಳೆದ 6 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ ಜ.29ರಂದು ಅಸ್ತಿತ್ವಕ್ಕೆ ಬರಲಿದೆ.
ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಗೋವಾ ರಾಜ್ಯಗಳ ಪತ್ರಕರ್ತ ಸಂಘಟನೆಯ ಜವಾಬ್ದಾರಿಯನ್ನು ಕೇರಳ ಪತ್ರಕರ್ತರ ಒಕ್ಕೂಟವು ರಾಜ್ಯದ ಟಿ.ಎಲ್.ಶ್ರೀನಿವಾಸ್ ಅವರಿಗೆ ವಹಿಸಿದೆ. ಜ.29 ರಂದು ಕರ್ನಾಟಕ ರಾಜ್ಯ ಪತ್ರಕರ್ತರ ಯೂನಿಯನ್‌ನ ಅಧ್ಯಕ್ಷರಾಗಿ ಇವರು ಮೈಸೂರು ಜಲದರ್ಶಿನಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಮಾತನಾಡಿದ ಶ್ರೀನಿವಾಸ್, ಮ್ಯೆಸೂರಿನಲ್ಲಿ ಮೊದಲ ಸಭೆ ನಡೆಯಲಿದ್ದು, 30 ಜಿಲ್ಲೆಗಳ ಪ್ರವಾಸದ ನಂತರ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವದು ಎಂದರು.
ನೂತನ ಒಕ್ಕೂಟವು ಮೈಸೂರು ಹಾಗೂ ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಲಿದ್ದು, ಕೇರಳ ಹಾಗೂ ತಮಿಳುನಾಡು ರಾಜ್ಯಗಳಂತೆ ರಾಜ್ಯದಲ್ಲಿಯೂ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಲಾಗುವುದು. ದಕ್ಷಿಣ ಭಾರತ ಸಂಘಟನೆಯ ನಂತರ ಕರ್ನಾಟಕ ರಾಜ್ಯದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.
ಯಾವದೇ ಪತ್ರಕರ್ತ ಸದಸ್ಯರು ಅಕಾಲಿಕ ನಿಧನ ಹೊಂದಿದ್ದಲ್ಲಿ ಅವರ ಅವಲಂಬಿತರಿಗೆ ತುರ್ತು ರೂ.3 ಲಕ್ಷ ಪರಿಹಾರವನ್ನು ಸಂಘದ ಮೂಲಕ ನೀಡುವ ನಿಯಮ ಕೇರಳ ಹಾಗೂ ತಮಿಳುನಾಡಿನಲ್ಲಿದೆ. ಅಪಘಾತ ವಿಮೆ, ಆರೋಗ್ಯ ವಿಮೆ, ನಿವೃತ್ತಿ ವೇತನ ಇತ್ಯಾದಿ ಸೌಲಭ್ಯಗಳು ಕರ್ನಾಟಕಕ್ಕಿಂತಲೂ ಇತರೆ ರಾಜ್ಯಗಳಲ್ಲಿ ಉತ್ತಮವಾಗಿದೆ.
ರಾಜಸ್ಥಾನ ರಾಜ್ಯದಲ್ಲಿ ಕೋವಿಡ್ ಸೋಂಕಿನಿAದ ಸಾವನ್ನಪ್ಪಿದ ಪತ್ರಕರ್ತರಿಗೆ ಅಲ್ಲಿನ ಸರ್ಕಾರ ರೂ.25 ಲಕ್ಷದವರೆಗೆ ಪರಿಹಾರ ನೀಡುತ್ತಿದೆ. ರೂ.10 ಲಕ್ಷ ಆರೋಗ್ಯ ವಿಮಾ ಸೌಲಭ್ಯ ಅಲ್ಲಿನ ಪತ್ರಕರ್ತರಿಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಭಾಗದ ಪತ್ರಕರ್ತರು ಸರ್ಕಾರದ ಸೌಲಭ್ಯ, ಪಿಂಚಣಿ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ.
ರಾಜ್ಯದ 30 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪ್ರಾರಂಭದ ಹಂತದಲ್ಲಿ 5 ಸಾವಿರ ಪತ್ರಕರ್ತರಿಗೆ ಸದಸ್ಯತನ ನೀಡುವ ಉದ್ದೇಶವಿದೆ. ರಾಜ್ಯದ ಪ್ರಮುಖ ಹಿರಿಯ ಪತ್ರಕರ್ತರ ಮಾರ್ಗದರ್ಶನದೊಂದಿಗೆ ಶಿಸ್ತು ಬದ್ಧವಾಗಿ, ಕಾನೂನು ಬದ್ಧವಾಗಿ ಸಂಘಟನೆಯನ್ನು ಬಲಪಡಿಸಲಾಗುತ್ತದೆ. ರಾಜ್ಯದಲ್ಲಿ ಇದೀಗ ಅಸ್ತಿತ್ವದಲ್ಲಿರುವ ಸಂಘಟನೆಗಳ ವಿರುದ್ಧವಾಗಿ ನೂತನ ಸಂಘಟನೆ ಹುಟ್ಟು ಹಾಕುತ್ತಿಲ್ಲ. ರಾಜ್ಯದ ಯಾವುದೇ ಕಾರ್ಯನಿರತ ಪತ್ರಕರ್ತರು ಸದಸ್ಯತನ ಹೊಂದಬಹುದಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ, ಆರೋಗ್ಯ ಸಮಸ್ಯೆ ಹೊಂದಿರುವ ಪತ್ರಕರ್ತರಿಗೆ ಸಕಾಲದಲ್ಲಿ ನೆರವು ಒದಗಿಸುವ ಚಿಂತನೆಯೂ ಸಂಘದಲ್ಲಿದೆ. ಪತ್ರಕರ್ತರು ಎದುರಿಸುತ್ತಿರುವ ಕಾನೂನು ಬಿಕ್ಕಟ್ಟನ್ನೂ ಪರಿಹರಿಸುವ ನಿಟ್ಟಿನಲ್ಲಿಯೂ ಸಂಘ ಕಾರ್ಯೋನ್ಮುಖವಾಗಲಿದೆ ಎಂದು ಅವರು ಹೇಳಿದರು.
ಜಲದರ್ಶಿನಿಯಲ್ಲಿ ನಡೆಯುವ ಪತ್ರಕರ್ತರ ಒಕ್ಕೂಟದ ಮೊದಲ ಸಭೆಯಲ್ಲಿ ಕೇರಳ ರಾಜ್ಯದ ಪತ್ರಕರ್ತ ಸಂಘಟನೆಯ ಅಧ್ಯಕ್ಷ ಪಿ.ಕೆ.ಹ್ಯಾರಿಸ್, ಕಾರ್ಯಾಧ್ಯಕ್ಷ ಉಸ್ಮಾನ್ ಅಂಜುಕುನ್ನು, ಪ್ರಧಾನ ಕಾರ್ಯದರ್ಶಿ ಡಿ.ದೀಪೇಶ್ ಬಾಬು, ಖಜಾಂಚಿ ಅಶ್ರಫ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಹುಬ್ಬಳ್ಳಿ, ಧಾರವಾಡ, ಕಾರವಾರ, ಉಡುಪಿ, ವಿಜಯಪುರ, ದಾವಣಗೆರೆ, ರಾಮನಗರ, ಬಾಗಲಕೋಟೆ, ಹಾವೇರಿ, ಶಿವಮೊಗ್ಗ ಮುಂತಾದ ಜಿಲ್ಲೆಗಳ ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ಶ್ರೀನಿವಾಸ್ ಮಾಹಿತಿ ನೀಡಿದರು.
Breaking News
- *ಅಂತರಾಷ್ಟ್ರೀಯ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅಲುಫ್ ಎ.ಆರ್ ಚಾಂಪಿಯನ್*
- *ಮಡಿಕೇರಿಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ : ರಾಷ್ಟ್ರದ ಸದೃಢತೆಗೆ ಯುವಜನರು ಕೈಜೋಡಿಸಿ: ಸಿವಿಲ್ ನ್ಯಾಯಾಧೀಶೆ ಶುಭ*
- *ಮಡಿಕೇರಿಯಲ್ಲಿ ಡಾ.ಅಖಿಲ್ ಕುಟ್ಟಪ್ಪ – ಅಶ್ವಥ್ ಅಯ್ಯಪ್ಪ ಸ್ಮರಣಾಥ೯ ಕ್ರಿಕೆಟ್ ಪಂದ್ಯಾವಳಿ : ಸಾಧಕ ಕ್ರೀಡಾಪಟುಗಳಾಗುವತ್ತ ಚಿತ್ತ ಹರಿಸಿ : ನಿವೃತ್ತ ಏರ್ ಮಾಷ೯ಲ್ ಕಾಯ೯ಪ್ಪ ಕರೆ*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*
- *ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ ಹರಪಳ್ಳಿ ರವೀಂದ್ರ*
- *ಕೂಡಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಆಟೋ ಚಾಲಕರು ಕನ್ನಡ ನಾಡು-ನುಡಿಯ ರಾಯಭಾರಿಗಳು : ವಿ.ಪಿ.ಶಶಿಧರ್ ಬಣ್ಣನೆ*
- *ಗೋಣಿಕೊಪ್ಪ : ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭ : ಡಾ.ಕೆ.ಬಸವರಾಜು*
- *ಶಾಸಕ ಎ.ಎಸ್.ಪೊನ್ನಣ್ಣ ರಿಗೆ ವಿಧಾನಸಭಾಧ್ಯಕ್ಷರ ಕಚೇರಿಯಿಂದ ಕೊಡುಗೆ*
- *ಜಿಲ್ಲಾ ಮಟ್ಟದ ಚಾಂಪಿಯನ್ಶಿಪ್ನಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ*
- *ವೀರ ಸೇನಾನಿಗಳಿಗೆ ಅಗೌರವ : ನಿವೃತ್ತ(ಮಾಜಿ) ಯೋಧರ ಒಕ್ಕೂಟ ಅರೆ ಸೇನಾಪಡೆ ಖಂಡನೆ : ಆರೋಪಿಯ ಗಡಿಪಾರಿಗೆ ಆಗ್ರಹ*