ಮಡಿಕೇರಿ ಜ.23 : ಮಡಿಕೇರಿ ತಾಲ್ಲೂಕಿನ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.
ದಂಬೆಕೋಡಿ ಮಾಚಯ್ಯ, ದಂಬೆಕೋಡಿ ಮಿಥುನ್, ಬೈಲೆರ ಸಾಬು ಬಾಲಕೃಷ್ಣ, ಬಿ.ಎನ್.ಸಂತೋಷ್ ಕುಮಾರ್, ಪರ್ಲಕೋಟಿ ರಾಘವಯ್ಯ, ಪರ್ಲಕೋಟಿ ಬೆಲ್ಲು ಬಾಲಕಷ್ಣ, ಪರ್ಲಕೋಟಿ ಪ್ರೀತಂ ಕುಮಾರ್ ಸೇರಿದಂತೆ 30 ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಧ್ವಜ ಹಿಡಿದರು.
ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ಗ್ರಾಮಾಂತರ ತಾಲ್ಲೂಕು ಅಧ್ಯಕ್ಷ ಕಾಂಗೀರ ಸತೀಶ್, ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ಪ್ರಮುಖರಾದ ಡೀನ್ ಬೋಪಣ್ಣ, ಕುಮುದಾ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.








