ಸುಂಟಿಕೊಪ್ಪ,ಜ.25 : ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಜನಪರ ಯೋಜನೆಗಳನ್ನು ಕಾರ್ಯಕರ್ತರು ಮತದಾರರ ಮನೆ ಮನೆಗೆ ತಲುಪಿಸಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಮಾದಾಪುರ ಹೋಬಳಿ ಬಿಜೆಪಿ ಶಕ್ತಿ ಕೇದ್ರದಿಂದ ಮಾದಾಪುರ ಸಮುದಾಯ ಭವನದಲ್ಲಿ ಏರ್ಪಡಿಸಲಾದ ವಿಜಯ ಸಂಕಲ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಸಮಾಜದ ಎಲ್ಲಾ ವರ್ಗಗಳಿಗೂ ತಲುಪಿದೆಯೊ ಎಂದು ಕಾರ್ಯಕರ್ತರು ಪರಿಶೀಲಿಸಬೇಕು ಎಂದರು.
ಮಾದಾಪುರ, ಗರ್ವಾಲೆ ಹಾಗೂ ಹರದೂರು ಗ್ರಾ.ಪಂ ವ್ಯಾಪ್ತಿಯ ಕಾರ್ಯಕರ್ತರು ಪಾಲ್ಗೊಂಡ ಈ ಸಭೆಯಲ್ಲಿ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ, ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಮನು ರೈ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಮಾದಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಡಿ.ಮಂಜುನಾಥ, ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಮುಖ ದರ್ಶನ್ ಜೋಯಪ್ಪ, ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕ ನಾಪಂಡ ಉಮೇಶ, ಮಾದಾಪುರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಕೊಪ್ಪತ್ತಂಡ ಗಣೇಶ, ಮಾಜಿ ಜಿ.ಪಂ.ಸದಸ್ಯ ಟಿ.ಪಿ.ಸಂದೇಶ, ಮಡಿಕೇರಿ ವಿಧಾನ ಕ್ಷೇತ್ರದ ಉಸ್ತುವಾರಿ ವಿಕ್ರಂ, ಸೋಮವಾರಪೇಟೆ ಬಿಜೆಪಿ ಉಪಾಧ್ಯಕ್ಷ ಎಂ.ಎ.ಪ್ರಭಾಕರ, ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ನಿರೂಪ, ಉಪಾಧ್ಯಕ್ಷೆ ಜ್ಯೋತಿ, ಗ್ರಾ.ಪಂ.ಸದಸ್ಯರುಗಳಾದ ಬಿದ್ದಪ್ಪ, ಗಿರೀಶ, ಸುರೇಶ ಮೊದಲಾದವರು ಉಪಸ್ಥಿತರಿದ್ದರು.