ಸೋಮವಾರಪೇಟೆ,ಜ.27: ಪಟ್ಟಣದ ಮಡಿಕೇರಿ ರಸ್ತೆಯ ನಿಶಾಂತ್ ಟವರ್ಸ್ ಸಂಕೀರ್ಣದಲ್ಲಿ ನೂತನವಾಗಿ ತೆರೆಯಲಾಗಿರುವ ಶ್ರೀವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19ನೇ ಶಾಖೆಯನ್ನು ಕಾಂಗ್ರೆಸ್ ಮುಖಂಡ ಡಾ. ಮಂಥರ್ ಗೌಡ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಬಿ.ಆರ್. ಮಹೇಶ್, ಕಾಫಿ ಬೆಳೆಗಾರರಾದ ಸುವಿನ ಕೃಪಾಲ್, ಉದ್ಯಮಿ ಜಿ.ಎಸ್. ಮೋಹನ್, ಸೊಸೈಟಿ ನಿರ್ದೇಶಕ ನಿತ್ಯಾನಂದ ಮುಂಡೋಡಿ, ಚಂದ್ರ ಕೋಲ್ಚಾರ್, ಸೇರಿದಂತೆ ಇತರರು ಹಾಜರಿದ್ದರು.







