ಮಡಿಕೇರಿ ಫೆ.1 ಕೇಂದ್ರ ಸರ್ಕಾರ ದೇಶದ ಜನರನ್ನು ಮೂರ್ಖರನ್ನಾಗಿಸಲು ಚುನಾವಣಾ ಗಿಮಿಕ್ ನ ಬಜೆಟ್ ನ್ನು ಮಂಡಿಸಿದೆ. ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಮೂಲಕ ಸರ್ಕಾರ ಉಳ್ಳವರ ಪರವಾಗಿದೆ ಎನ್ನುವುದನ್ನು ಸಾಬೀತು ಪಡಿಸಿದೆ. ಎಲ್ಲೂ ಕೃಷಿಕರು ಹಾಗೂ ಕಾರ್ಮಿಕರ ಪರವಾದ ಸ್ಪಷ್ಟ ನಿಲುವನ್ನು ಸರ್ಕಾರ ಘೋಷಿಸಿಲ್ಲ.
ಚಿನ್ನ ಮತ್ತು ಬಟ್ಟೆ ಬೆಲೆಯನ್ನು ದುಬಾರಿಗೊಳಿಸಲಾಗಿದೆ, ಬಡವರು ಮದುವೆ ಮತ್ತಿತರ ಶುಭ ಕಾರ್ಯ ಮಾಡುವಾಗ ಚಿನ್ನಾಭರಣ, ಬಟ್ಟೆಯನ್ನು ಕೊಳ್ಳಬಾರದೆ ?
ಬಜೆಟ್ ತುಂಬಾ ಸುಳ್ಳಿನ ಕಂತೆಯೇ ಇದ್ದು, ಜನರ ಕಣ್ಣಿಗೆ ಮಣ್ಣೆರಚುವ ಚುನಾವಣಾ ತಂತ್ರಗಾರಿಕೆ ಎದ್ದು ಕಾಣುತ್ತಿದೆ. ಹೆಚ್ಚು ತೆರಿಗೆ ಪಾವತಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪುಟ್ಟ ಜಿಲ್ಲೆ ಕೊಡಗಿನಂತಹ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಯಾವುದೇ ನೆರವು ನೀಡಿಲ್ಲ. (( ಕೆ.ಎಂ.ಗಣೇಶ್, ಅಧ್ಯಕ್ಷರು, ಜಾತ್ಯತೀತ ಜನತಾದಳ, ಕೊಡಗು ಜಿಲ್ಲೆ. ))