ಕಡಂಗ ಫೆ.7 : ಕಡಂಗ ಪ್ರೀಮಿಯರ್ ಕ್ರಿಕೆಟ್ ಲೀಗ್ -2023 ಪಂದ್ಯಾವಳಿಯು ಫೆ.9 ರಿಂದ 12 ರವರೆಗೆ ಕಡಂಗ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಮಾಜಿ ಕಾರ್ಯದರ್ಶಿ ಎಂ.ಬಿ.ನೌಫಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 8 ವರ್ಷಗಳ ಹಿಂದೆ-2016ರಲ್ಲಿ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟವು ಆಯೋಜಿಸಲಾಗಿದ್ದು, ಇದೀಗ ಎಂಟನೇ ವರ್ಷಕ್ಕೆ ಕ್ರೀಡಾಕೂಟಕ್ಕೆ ಫೆ.9 ರಂದು ಬೆಳಿಗ್ಗೆ 10 ಗಂಟೆಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಲಿದ್ದಾರೆ ಎಂದರು.
ಕ್ರೀಡಾಕೂಟದ ಅಧ್ಯಕ್ಷ ಆಸ್ಕರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶಾಂತಕುಮಾರಿ, ನೆಲಚಂಡ ಕಿರಣ್ ಕಾರ್ಯಪ್ಪ ,ಸುಲೇಮಾನ್ ಅಬ್ದುಲ್ಲಾ ಜುನಿದ್, ಗಣು ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.
ಎಂಟು ಬಲಿಷ್ಠ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದ್ದು, ಕಡಂಗ ಸುತ್ತಮುತ್ತಲಿನ ಗ್ರಾಮದ ಯುವ ಕ್ರೀಡಾಪಟುಗಳ ಪ್ರತಿಭೆಗಳನ್ನು ಹೊರ ತರುವುದು ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಳೆದ ಎಂಟು ವರ್ಷಗಳಿಂದ ಕ್ರೀಡಾಕೂಟದ ಆಯೋಜಕರು ಬಡ ವಿದ್ಯಾರ್ಥಿಗಳಿಗೆ ಬುಕ್ ವಿತರಣೆ, ಬಡ ರೋಗಿಗಳಿಗೆ ಸಹಾಯ ನೀಡುವುದು ಅಲ್ಲದೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿ ಗೌರವಿಸುತ್ತ ಬರಲಾಗಿದೆ ಎಂದರು.
ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೆಪಿಎಲ್ ಸಂಸ್ಥಾಪಕ ಕೆ.ಎಂ. ಜುನಿದ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂಕಿತ್ ಪೊನ್ನಪ್ಪ, ಕೋಡಿರ ವಿನೋದ್ ನಾಣ್ಯಯ, ಕೋಡಿರ ಪ್ರಸನ್ನ ತಮ್ಮಯ್ಯ, ಸಿ.ಇ.ಸುಬೀರ್ , ಸಿ.ಎ.ಜುನೈದ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೆ ಪಿ ಎಲ್ ಎಂಟನೇ ಆವೃತ್ತಿಯ ಅಧ್ಯಕ್ಷ ಆಸ್ಕರ್ , ಸಹಕಾರ್ಯದರ್ಶಿ ಗಳಾದ ಪಿ. ಎಚ್.ಶಮೀರ್ , ಕರಿಂ, ಜಲೀಲ್ ಯೋನಸ್ ಉಪಸ್ಥಿತರಿದ್ದರು.