ಚೆಟ್ಟಳ್ಳಿ ಫೆ.9 : ಬಾಳುಗೋಡು ಫೆಡರೇಶನ್ ಆಫ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಮಾಸಿಕ ಸಭೆ ಸಮಾಜದ ಅಧ್ಯಕ್ಷರಾದ ಬಲ್ಲಣಮಾಡ ರೀಟಾ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸನ್ಮಾನ : ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಕೊಡಗಿನ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಕೂಟದ ಮಾಜಿ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಹಾಗೂ ಕೂಟದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಕೂಟದ ಸದಸ್ಯೆಬೊಪ್ಪಂಡಬೊಳ್ಳಮ್ಮನಾಣಯ್ಯ ಮಾತನಾಡಿ , ಭಾರತ ದೇಶದಲ್ಲಿ ಸಾಧಕರಿಗೆ ನೀಡುವ ಪದ್ಮಶ್ರೀ ಪ್ರಶಸ್ತಿಯು ಈ ಬಾರಿ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರವನ್ನು ದೇಶದುದ್ದಕ್ಕೂ ಪರಿಚಯಿಸಿದ ರಾಣಿಮಾಚಯ್ಯರಿಗೆ ನೀಡಿರುವುದು ಕೊಡಗಿಗೆ ಹೆಮ್ಮೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿಮಾಚಯ್ಯ, ಈ ಪ್ರಶಸ್ತಿ ನನಗೆ ಮಾತ್ರವಲ್ಲ ನನ್ನೊಂದಿಗೆ ಕೈಜೋಡಿಸಿದ ಸಾವಿರಾರು ಹೆಣ್ಣು ಮಕ್ಕಳಿಗೆ ಸಲ್ಲಬೇಕು ಎಂದರು.
ಈ ಸಂದರ್ಭ ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ಚೇಂದಂಡ ಮೀನಾಸುಬ್ಬಯ್ಯ ವರದಿ ವಾಚಿಸಿ, ಲೆಕ್ಕ ಪತ್ರವನ್ನು ಖಜಾಂಚಿ ಕಳ್ಳಿಚಂಡಅಕ್ಕಮ್ಮ ಓದಿದರು.ಚೇಂದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಅಧ್ಯಕ್ಷೆ ರೀಟಾಅಪ್ಪಯ್ಯ ಸ್ವಾಗತಿಸಿದರು. ಸಹಕಾರ್ಯದರ್ಶಿ ಮುಳ್ಳಂಡ ಶೋಭಾಚಂಗಪ್ಪ ರಾಣಿಮಾಚಯ್ಯ ಅವರ ಪರಿಚಯ ಮಾಡಿದರು. ಉಪಾಧ್ಯಕ್ಷೆ ಮೂವೆರ ಬೊಳ್ಳು ಕುಟ್ಟಪ್ಪ ವಂದಿಸಿರು.
ನಂತರ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ವಿಜೇತರಿಗೆ ರಾಣಿಮಾಚಯ್ಯ ಬಹುಮಾನ ವಿತರಿಸಿದರು.