ನಾಪೋಕ್ಲು ಫೆ.11 : ಇತಿಹಾಸ ಪ್ರಸಿದ್ಧ ನಾಪೋಕ್ಲು ಸಮೀಪದ ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಾಹ್ಮಾನ್ ವಲಿಯುಲ್ಲಾಹಿ ಹಾಗೂ ಅವುಲಿಯಾಗಳ ಉರೂಸ್ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು.
ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನ ದೊಂದಿಗೆ ದರ್ಗಾಗೆ ತೆರಳಿದ ಬಾಂಧವರು ಮಸೀದಿಯ ಖತೀಬರಾದ ಹಂಝ ರಹ್ಮಾನಿ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು.
ಬಳಿಕ ಚೆರಿಯಪರಂಬು ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಚ್.ಅಹಮದ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಫೆ.14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉರೂಸ್ ಕಾರ್ಯಕ್ರಮ ನಡೆಯಲಿದೆ. ಫೆ.13 ಸೋಮವಾರ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು, ಜನಪ್ರತಿನಿಧಿಗಳು,ಸಮಾಜಸೇವಕರು,ಗಣ್ಯರು ಭಾಗವಹಿಸಲಿದ್ದಾರೆ.
ಅದೇ ದಿನ ಸಂಜೆ 4 ಗಂಟೆಗೆ ಮೌಲೂದ್ ಪಾರಾಯಣ ಹಾಗೂ ಸರ್ವಧರ್ಮೀಯರಿಗೆ ಅನ್ನದಾನ ಕಾರ್ಯಕ್ರಮ ನೆರವೇರಲಿದ್ದು, ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉರೂಸ್ ಸಮಾರಂಭ ಯಶಸ್ವಿ ಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಜಮಾಅತ್ ಉಪಾಧ್ಯಕ್ಷ ಪಿ.ಎ.ಮಿರ್ಷಾದ್, ಕಾರ್ಯದರ್ಶಿ ರಶೀದ್ಪಿ. ಎಂ, ಮಾಜಿ ಅಧ್ಯಕ್ಷ ಪರವಂಡ ಅಬ್ದುಲ್ ರೆಹ್ಮಾನ್ ಹಾಜಿ, ಮಾಜಿ ಕಾರ್ಯದರ್ಶಿ ಪಿ. ಎ.ಸಿರಾಜ್, ಉಸ್ಮಾನ್ ಸಿ.ಎಂ, ಸದಸ್ಯರಾದ ಇಬ್ರಾಹಿಂ, ಮಮ್ಮು, ದಾವೂದ್ ಹಾಜಿ, ಉಮ್ಮರ್, ಹಾರಿಸ್, ಹಸೈನಾರ್ ಹಾಜಿ,ಉಸ್ಮಾನ್, ಹಂಸ,ಆಲಿ ಸೇರಿದಂತೆ ಸಮಿತಿಯ ಪ್ರಮುಖರು, ಊರಿನ ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು