ಏ.29 ಮತ್ತು 30 ರಂದು ವಯಕೋಲ್ ಪುಳಿಙೋಂ ಉರೂಸ್
11/02/2023

ಮಡಿಕೇರಿ ಫೆ.11 : ಕುಂಜಿಲ ಕಕ್ಕಬ್ಬೆ ಸಮೀಪದ ವಯಕೋಲಿನಲ್ಲಿ ಪುಳಿಙೋಂ ಔಲಿಯಾಕಳ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ ಸಮಾರಂಭವು ಈ ಬಾರಿ ಏ.29 ಮತ್ತು 30 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಯಕೋಲ್ ಆಡಳಿತ ಮಂಡಳಿ ತಿಳಿಸಿದೆ.
