ಮಡಿಕೇರಿ ಫೆ. 13 : ಮಡಿಕೇರಿಯಲ್ಲಿನ ಭಾರತೀಯ ಜೀವವಿಮಾ ಶಾಖೆಯಲ್ಲಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿಗಾಗಿ ನೂತನವಾಗಿ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘವನ್ನು ರಚಿಸಲಾಯಿತು.
ಸಂಘದ ಅಧ್ಯಕ್ಷರಾಗಿ ಎಂ.ಕೆ.ನಾಚಪ್ಪ, ಉಪಾಧ್ಯಕ್ಷರಾಗಿ ಗೀತಾ ಗಿರೀಶ್, ಕಾಯಾ೯ಧ್ಯಕ್ಷರಾಗಿ ಮುರಳೀಧರ್, ಪ್ರಧಾನ ಕಾಯ೯ದಶಿ೯ಯಾಗಿ ಆನಂದ್ ಎಸ್.ಜಾಧವ್, ಖಚಾಂಜಿಯಾಗಿ ಅಯಿಷಾ ಹಮೀದ್, ಸಹಕಾಯ೯ದಶಿ೯ಯಾಗಿ ಬಿ.ಕೆ. ಪುಪ್ಪವೇಣಿ ಮತ್ತು ಮುಖ್ಯ ಗೌರವ ಸಲಹೆಗಾರರಾಗಿ ಕೆ.ಎ.ತಿಮ್ಮಯ್ಯ ಅವಿರೋಧವಾಗಿ ಆಯ್ಕೆಯಾದರು.
ಇವರೊಂದಿಗೆ 31 ಪ್ರತಿನಿಧಿಗಳು ಸದಸ್ಯರಾಗಿ ಸೇಪ೯ಡೆಯಾಗಿದ್ದಾರೆ. ಈ ಸಂಘಟನೆ ವತಿಯಿಂದ ಜೀವವಿಮಾ ನಿಗಮದ ಹಿರಿಯ ಪ್ರತಿನಿಧಿಯಾಗಿದ್ದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.















