ಮಡಿಕೇರಿ ಫೆ.13 : ನಗರದ ಪ್ರಥಮ ಆಯುರ್ವೇದ ಪಂಚಕರ್ಮ ಕೇಂದ್ರ ಶ್ರೀ ಅಖಿಲರವಿ ಆಯುರ್ಶಾಲದ 19ನೇ ವಾರ್ಷಿಕೋತ್ಸವದ ಪ್ರಯುಕ್ತ ಫೆ.15 ರಂದು ವಿನೂತನ ಸೇವೆಗಳು ಆರಂಭಗೊಳ್ಳಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಡಾ.ಎ.ಆರ್.ರಾಜಾರಮ್, ನಗರದ ಅಪ್ಪಚ್ಚಕವಿ ರಸ್ತೆಯಲ್ಲಿರುವ ಶ್ರೀ ಅಖಿಲರವಿ ಆಯುರ್ಶಾಲದಲ್ಲಿ ಬೆಳಿಗ್ಗೆ 10.30 ಗಂಟೆಗೆ ಹಿರಿಯ ನಾಗರೀಕರು ಹಾಗೂ ವೈದ್ಯಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ವಾರ್ಷಿಕೋತ್ಸವದ ಪ್ರಯುಕ್ತ ಕೊಡಗಿನಲ್ಲಿ ಪ್ರಥಮವಾಗಿ ಆಯುರ್ವೇದ ಡೇ ಕೆರ್, ತುರ್ತು ಆಯುರ್ವೇದ ಚಿಕಿತ್ಸೆಗೆ ಬೇಕಾದವರಿಗೆ ‘ಪಥ್ಯ’ ಆಹಾರ ವ್ಯವಸ್ಥೆ, ಸಂಜೆ 5.30 ರಿಂದ 6.30ರ ವರೆಗೆ ಉಚಿತ ‘ಪವರ್ ಯೋಗ’ ತರಬೇತಿ, ಕಾಯಿಲೆಗನುಸಾರ ಪ್ರಥಮ ಬಾರಿಗೆ ‘ಚಿಕಿತ್ಸಾ ಯೋಗ’ದ ಬಳಕೆ, ಆಯುರ್ವೇದ ಸಂಬಂಧಿತ ಉತ್ಪನ್ನಗಳ ಮಾಹಿತಿ ಹಾಗೂ ಮಾರಾಟ, ಆಯುರ್ವೇದದಲ್ಲೇ ಪ್ರಥಮ ಎನಿಸಬಹುದಾದ ವಿಶೇಷ ‘ದೋಷಹರ ಚಿಕಿತ್ಸೆಗಳು’ ವಿನೂತನ ಸೇವೆಗಳು ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.