ಮಡಿಕೇರಿ ಫೆ.13 : ನಗರದ ವಿಂಗ್ಸ್ ಆಫ್ ಪ್ಯಾಷನ್ ಡ್ಯಾನ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾದ ಸಾಂಸ್ಕೃತಿಕ ಸ್ಪರ್ಧೆ ಅಭೂತಪೂರ್ವ ಯಶಸ್ಸನ್ನು ಕಂಡಿತು.
ನಗರದ ಬಾಲಭವನದಲ್ಲಿ ಅಪರಾಹ್ನ 2 ಗಂಟೆಯಿಂದ ಆರಂಭವಾದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಏಳು ಗಂಟೆಯವರೆಗೂ ಸಾಂಗವಾಗಿ ನಡೆಯಿತು. ವಿಂಗ್ಸ್ ಆಫ್ ಫ್ಯಾಷನ್ ಸಂಸ್ಥೆಯ ನಿರ್ದೇಶಕರು ಹಾಗೂ ನೃತ್ಯ ತರಬೇತುದಾರರಾದ ಪ್ರೀತಾ ಕೃಷ್ಣ ಜಿಲ್ಲೆಯ ಮಕ್ಕಳು ಹಾಗೂ ಮಹಿಳೆಯರ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿದರು.
ಪುಟ್ಟ ಕಂದಮ್ಮಗಳಿಂದ ಆರಂಭಿಸಿ ಬೇರೆ ಬೇರೆ ವಯೋಮಾನದ ಮಕ್ಕಳಿಗೆ, ವಿವಿಧ ವಿಭಾಗಗಳಲ್ಲಿ, ಫ್ಯಾಷನ್ ಶೋ, ಜಾನಪದ ನೃತ್ಯ (ವೈಯಕ್ತಿಕ ಹಾಗೂ ಸಮೂಹ) ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ವಕೀಲರಾದ ಮೀನಾ ಕುಮಾರಿ, ಖ್ಯಾತ ವೈದ್ಯೆ ರೇಣುಕಾ ಸುಧಾಕರ್ ಮತ್ತು ಉಪನ್ಯಾಸಕಿ ಕೆ.ಜಯಲಕ್ಷ್ಮಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸಾಧನೆ ಮಾಡಿದ ವಿಂಗ್ಸ್ ಆಫ್ ಫ್ಯಾಷನ್ ನ ವಿದ್ಯಾರ್ಥಿನಿ, ದೃತಿ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ಪರ್ಧೆಗಳ ತೀರ್ಪುಗಾರರಾಗಿ ಚಿತ್ರಾ ಆರ್ಯನ್, ಶಾರದಾ, ಯಶಸ್ವಿನಿ ಹಾಗೂ ಅದಿಥಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮವನ್ನು ಗ್ರಂಥ ರೈ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕರಾದ ಪ್ರೀತಾ ಕೃಷ್ಣ ಸ್ವಾಗತಿಸಿದರು. ರುಷಿಕಾ ಸರ್ವರನ್ನು ವಂದಿಸಿದರು.
ವಿವಿಧ ಸ್ಪರ್ಧೆಗಳ ವಿಜೇತರು : ಛದ್ಮವೇಷ ಸ್ಪರ್ಧೆ (1-5) ವಿ.ಆದ್ಯ ಪ್ರಥಮ, ಎಂ.ಟಿ. ರಕ್ಷಾ ದ್ವಿತೀಯ, ವಿ.ಹರ್ಷ ತೃತೀಯ, ದೃಶ್ಯ ಬೋಜಮ್ಮ ನಾಲ್ಕನೇ ಸ್ಥಾನ, ಎನ್.ಎ.ಬೌಶಿಕ ಐದನೇ ಸ್ಥಾನ ಪಡೆದಿದ್ದಾರೆ.
5-10 ವರ್ಷದವರ ಛದ್ಮವೇಷ ಸ್ಪರ್ಧೆಯಲ್ಲಿ ಕುಶಿ ಪ್ರಥಮ, ಆದ್ವಿಕ್ ದ್ವಿತೀಯ, ಶ್ರಾವ್ಯ ತೃತೀಯ, ಎಂ.ಡಿ.ಗನ್ಯಾ ನಾಲ್ಕನೇ ಸ್ಥಾನ ಪಡೆದುಕೊಂಡರು.
ಫ್ಯಾಷನ್ ಶೋ ಸ್ಪರ್ಧೆಯಲ್ಲಿ ವಿ.ಆದ್ಯ ಪ್ರಥಮ, ದ್ವಿತೀಯ ಸ್ಥಾನವನ್ನು ಸಾರಾ ಹಾಗೂ ವಿ.ಆರ್ನವ್ ಪಡೆದುಕೊಂಡರೆ, ತೃತೀಯ ದೃಶ್ಯ ಬೋಜಮ್ಮ, ನಾಲ್ಕನೇ ಸ್ಥಾನ ಎ.ಯೆದ್ವಿಕ್ ನಾಲ್ಕನೇ ಸ್ಥಾನ ಪಡೆದುಕೊಂಡರು.
7 ರಿಂದ 10 ವರ್ಷದವರ ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ರಿಯೋನ ಮತ್ತು ಸುಮೇಧಾ ರಾವ್ ಪ್ರಥಮ, ಹೊಸಕೋಲು ಯಾನ ಉದಯ್ ದ್ವಿತೀಯ, ಎಸ್.ಕುಶಿ ತೃತೀಯ ಸ್ಥಾನಪಡೆದುಕೊಂಡಿದ್ದಾರೆ.
10 ರಿಂದ 13 ವರ್ಷದವರ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ವೃಷ್ಟಿ. ವಿಜಿ ಮತ್ತು ಎಂ.ಎನ್.ಶ್ರೇಯ, ದ್ವಿತೀಯ ಕೃಪಾ, ತೃತೀಯ ಆಫ್ನಾಜ್, 14 ರಿಂದ 18 ವರ್ಷ ನೃತ್ಯ ಸ್ಪರ್ಧೆಯಲ್ಲಿ ಆದಿತ್ಯ ಪ್ರಥಮ, ಸ್ಪಂದನ ದ್ವಿತೀಯ, ಹೊಸಕೋಲು ನಿಧಿ ಉದಯ್ ತೃತೀಯ, ಡಿ.ಕೆ. ಚಿನ್ಮಯಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಸಮೂಹ ನೃತ್ಯ ಸ್ಪರ್ಧೆಯಲ್ಲಿ ಇನ್ ಟು ಪೀಸ್ ನೃತ್ಯ ಬಳಗ ಮತ್ತು ಲಿಟಲ್ ಸ್ಟಾರ್ ನೃತ್ಯ ಬಳಗ ಪ್ರಥಮ, ಪ್ರತಿಮಾ ಮತ್ತು ತಂಡ ಹಾಗೂ ತೃಪ್ತಿ ಮತ್ತು ತಂಡ ದ್ವಿತೀಯ, ವೀ ಡ್ಯಾನ್ಸ್ ತಂಡ ತೃತೀಯ ಸ್ಥಾನ ಪಡೆದುಕೊಂಡರು.























