ಮಡಿಕೇರಿ ಫೆ.15 : ಕರಿಕೆ ಗ್ರಾ.ಪಂ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ಕೊಡಗು ಜಿಲ್ಲಾ ಪಂಚಾಯಿತಿಯಿಂದ ಹೆಚ್ಚಿನ ಅನುದಾನ ಮಂಜೂರು ಮಾಡಿ ಶೀಘ್ರ ಕಾಮಗಾರಿ ಆರಂಭಿಸಬೇಕೆಂದು ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ಒತ್ತಾಯಿಸಿದ್ದಾರೆ.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಕರಿಕೆ ಗ್ರಾಮದಲ್ಲಿ ಶೇ.70 ರಷ್ಟು ಮಂದಿ ಹಿಂದುಳಿದ ವರ್ಗಕ್ಕೆ ಸೇರಿದವರು ವಾಸವಾಗಿದ್ದಾರೆ. ಇಲ್ಲಿನ ವಿವಿಧ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದ್ದರಿಂದ ಜಿ.ಪಂ ಮೂಲಕ ಹೆಚ್ಚಿನ ಅನುದಾನ ನೀಡಬೇಕೆಂದು ಗಮನ ಸೆಳೆದರು.
ಆನೆಪಾರೆ ಎಸ್.ಸಿ.ಕಾಲೋನಿ ರಸ್ತೆ, ಬೀಟಿಯಾಡಿ ಎಸ್.ಸಿ.ಕಾಲೋನಿ ರಸ್ತೆ, ತೋಟಂ ಆನೆಪಾರೆ ರಸ್ತೆ, ಚೆಂಬೇರಿ ಆನೆಪಾರೆ ರಸ್ತೆ, ಕೊಚ್ಚಿ ಎಸ್.ಸಿ.ಕಾಲೋನಿ ರಸ್ತೆ, ಕುಂಡಡ್ಕ ಎಸ್.ಸಿ.ಕಾಲೋನಿ ರಸ್ತೆ, ಮಾರಾಟಿಮೂಲೆ ಎಸ್.ಸಿ.ಕಾಲೋನಿ ರಸ್ತೆ, ಮಡೆಕಾನ ಎಸ್.ಸಿ.ಕಾಲೋನಿ ರಸ್ತೆ, ಕುಡಿಯಂಕಲ್ಲು ಎಸ್.ಟಿ.ಕಾಲೋನಿ ರಸ್ತೆ, ಕೊಳಂಗರೆ ಎಸ್.ಟಿ.ಕಾಲೋನಿ ರಸ್ತೆ, ಪೊಂಗಾನ ಎಸ್.ಟಿ.ಕಾಲೋನಿ ರಸ್ತೆ, ಕುಂಡತ್ತಿಕಾನ ಎಸ್.ಟಿ.ಕಾಲೋನಿ ರಸ್ತೆ, ಹಳೆಮನೆ ಕುಂಡತ್ತಿಕಾನ ರಸ್ತೆ, ಪಚ್ಚೆಪಿಲಾವು ಎಸ್.ಟಿ.ಕಾಲೋನಿ ರಸ್ತೆ, ಆಲತ್ತಿಕಡವು ಎಸ್.ಸಿ.ಕಾಲೋನಿ ರಸ್ತೆ, ಬಾಳೆಬಳಪು ಎಸ್.ಟಿ.ಕಾಲೋನಿ ರಸ್ತೆ, ಕುಂಡತ್ತಿಕಾನ ಎಸ್.ಸಿ.ಕಾಲೋನಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬೇಕು ಎಂದು .ಬಾಲಚಂದ್ರ ನಾಯರ್ ಗಮನ ಸೆಳೆದರು.









