ಮಡಿಕೇರಿ ಫೆ.15 : ಕೊಡಗು ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತ ನರೇಶ್ಚಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಪತ್ರಿಕಾ ಭವನದಲ್ಲಿ ನಡೆದ ಸಂತಾಪ ಸಭೆಯಲ್ಲಿ ನರೇಶ್ಚಂದ್ರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಸಭೆಯಲ್ಲಿ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ವಿ.ರವಿಕುಮಾರ್, ಸಲಹೆಗಾರ ಬಿ.ಜಿ.ಅನಂತಶಯನ, ಪತ್ರಿಕಾಭವನ ಟ್ರಸ್ಟಿ ಶ್ರೀಧರ್ ಹೂವಲ್ಲಿ ನುಡಿನಮನ ಸಲ್ಲಿಸಿದರು.
ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ಸಹಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ, ಸಹ ಖಜಾಂಚಿ ಸಯ್ಯದ್ ಇರ್ಫಾನ್, ನಿರ್ದೇಶಕರಾದ ಹೆಚ್.ಎಸ್.ಲಕ್ಷ್ಮೀಶ್, ಸದಸ್ಯರಾದ ಪ್ರವೀಣ್, ಪಿ.ಎಂ.ರವಿ, ಸಲಹೆಗಾರ ಅನಿಲ್ ಹೆಚ್.ಟಿ, ಕುಶಾಲನಗರ ತಾಲ್ಲೂಕು ಅಧ್ಯಕ್ಷ ವಿಘ್ನೇಶ್ ಭೂತನಕಾಡು, ಪತ್ರಿಕಾ ಭವನ ವ್ಯವಸ್ಥಾಪಕಿ ಯಮುನಾ, ಸಿಬ್ಬಂದಿ ಸವಿತಾ, ಅಲ್ಲಾರಂಡ ರಂಗಚಾವಡಿಯ ಸಂಚಾಲಕ ವಿಠಲ್ ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.









