ಮಡಿಕೇರಿ ಫೆ.15 : ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ಫೆ.19 ರಂದು 18 ಕೊಡವ ಭಾಷಿಕ ಜನಾಂಗಗಳ ಒತ್ತೋರ್ಮೆ ಕೂಟ ನಡೆಯಲಿದೆ ಎಂದು ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.
ಬೆಳಿಗ್ಗೆ 9.30ಕ್ಕೆ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಜಾನಪದ ಕಲಾ ಮೆರವಣಿಗೆಗೆ ಚಾಲನೆ ನೀಡಲಿದ್ದು, ವಸ್ತು ಪ್ರದರ್ಶನವನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.
ಜಾನಪದ ಸಾಂಸ್ಕøತಿಕ ಮತ್ತು ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸಭಾ ಕಾರ್ಯಕ್ರಮವನ್ನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಹಾಗೂ ವಿರಾಜಪೇಟೆ ವಿಧಾಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮಾಜಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಸಮಾಜ ಸೇವಕ ಕೆ.ಎಂ.ಬಿ.ಗಣೇಶ್, ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷ ಕೊರಕುಟ್ಟಿರ ಸರಾ ಚಂಗಪ್ಪ, ಕೊಡಗು ಜಿ.ಪಂ ಮಾಜಿ ಸದಸ್ಯರಾದ ಬಬ್ಬಿರ ಸರಸ್ವತಿ ಪಾಲ್ಗೊಳ್ಳಲಿದ್ದಾರೆ.
ಹಂಪಿ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ವಿಜಯ್ ಪೂಣಚ್ಚ ತಂಬಂಡ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಶ್ ನಾಣಯ್ಯ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನ್ನಂಡ ಪ್ರಥ್ಯು, ಐರಿ ಸಮಾದ ಅಧ್ಯಕ್ಷ ಮೇಲತ್ತಂಡ ರಮೇಶ್, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಕಸ್ತೂರಿ ಗೋವಿಂದಮ್ಮಯ್ಯ, ಕೊಡಗು ಕೆಂಬಟ್ಟಿ ಸಮಾಜದ ಅಧ್ಯಕ್ಷ ದೊಡ್ಡಕುಟ್ಟಡ ರಾಮು ಅಯ್ಯಪ್ಪ, ಕೊಯವ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ, ಸವಿತ ಸಮಾಜದ ಅಧ್ಯಕ್ಷ ವೇದಪ್ಪಂಡ ಬಿದ್ದಪ್ಪ, ಕುಡಿಯ ಸಮಾಜದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಕಣಿಯ ಸಮಾಜದ ಮುಖಂಡ ಕಣಿಯರ ಪ್ರಕಾಶ, ಪಣಿಕ ಸಮಾಜದ ಅಧ್ಯಕ್ಷ ಪೊನ್ನಜ್ಜೀರ ದಿನೇಶ್ ಸೋಮಯ್ಯ, ಕೊಲೇಯ ಸಮಾಜದ ಅಧ್ಯಕ್ಷ ಕೊಲೇಯಂಡ ಗಿರೀಶ್, ಬೂಣೆಪಟ್ಟಮ ಸಮಾಜದ ಮುಖಂಡ ಜೋಕೀರ ಜೀವನ್, ಬಣ್ಣ ಸಮಾಜದ ಬೀಕಚಂಡ ಬೆಳ್ಯಪ್ಪ, ಮಡಿವಾಳ ಸಮಾಜದ ಮುಖಂಡ ಪಾತಂಡ ಸಂತೋಷ್, ಗೊಲ್ಲ ಸಮಾಜದ ಅಧ್ಯಕ್ಷ ಪೊನ್ನುಕಂಡ ಚಿತ್ರಾ ಮಾದಪ್ಪ, ಮಲೀಯ ಸಮಾಜದ ಅಧ್ಯಕ್ಷ ಮಲೆಯಡ ರಾಜಾ ಮುತ್ತಪ್ಪ, ಕೊಡಗು ನಾಯರ್ ಸಮಾಜದ ಮುಖಂಡ ನಾಯಮಂಡ ರನ್ನ ಮೇದಪ್ಪ, ಕಾಪಾಳ ಸಮಾಜದ ಮುಖಂಡ ಕೆ.ಮಿಲನ್, ಮೇದ ಸಮಾಜದ ಮುಖಂಡ ಎಂ.ಚಂದ್ರ, ಅರಮನೆ ಪಾಲೆ ಸಮಾಜದ ಅಧ್ಯಕ್ಷ ಎ.ಮಂದಣ್ಣ ಗೌರವ ಉಪಸ್ಥಿತರಿರುವರು.
::: ಸಾಧಕರಿಗೆ ಸನ್ಮಾನ :::
ಕಾರ್ಯಕ್ರಮದಲ್ಲಿ 18 ಸಮುದಾಯಗಳ ಸಾಧಕರಾದ ಹೆಗ್ಗಡೆ ಸಮಾಜದ ಕೊರಕುಟ್ಟಿರ ಸರಾ ಚಂಗಪ್ಪ, ಐರಿ ಸಮಾಜದ ಪೊನ್ನೀರ ವಾಸು ಉತ್ತಯ್ಯ, ಅಮ್ಮಕೊಡವ ಸಮಾಜದ ಹೆಮ್ಮೆಚ್ಚಿಮನೆ ವಿಠಲ, ಕೊಡವ ಸವಿತಾ ಸಮಾಜದ ಮುಡುವಂಡ ಆಶಿಕ್ ಉತ್ತಪ್ಪ, ಕೋಲೆಯ ಸಮಾಜದ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ, ಪಣಿಕ ಸಮಾಜದ ದೇವಮಕ್ಕಡ ಗಿಣಿ ಪೂಣಚ್ಚ, ಕಣಿಯ ಸಮಾಜದ ಚೇಂದುವಂಡ ಸಿ.ಪೂಣಚ್ಚ, ಬೂಣೆಪಟ್ಟಮ ಸಮಾಜದ ಜೋಕಿರ ಮುತ್ತಮ್ಮ, ಕೋಯವ ಸಮಾಜದ ಈರಮ್ಮಂಡ ದೇವಯ್ಯ, ಕುಡಿಯ ಸಮಾಜದ ಕುಡಿಯರ ಎಂ.ಕಾವೇರಪ್ಪ, ಬಣ್ಣ ಸಮಾಜದ ಬೀಕಚಂಡ ರಮೇಶ್ ಗಣಪತಿ, ಮಲೆಯ ಸಮಾಜದ ಮಲೆಯ ಸುರೇಶ್ ಸುಬ್ಬಯ್ಯ, ಕೊಡವ ಮಡಿವಾಳ ಸಮಾಜದ ಬಳಪಂಡ ಡಾಲಿ ತಮ್ಮಯ್ಯ, ಕಾಪಾಳ ಸಮಾಜದ ಕಾಪಾಳ ಗಿರೀಶ್ ದೇಜ, ಅರಮನೆ ಪಾಲೆ ಸಮಾಜದ ಮಂದಣ್ಣ, ಗೊಲ್ಲ ಸಮಾಜದ ಅರೆಯಂಡ ಸೋಮಣ್ಣ, ಮೇದ ಸಮಾಜದ ಮೇದರ ಚಿಣ್ಣಪ್ಪ ಹಾಗೂ ವಿಶೇಷವಾಗಿ ಜನಾಂಗದ ಶತಾಯುಷಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಾಬ ಸುಬ್ರಮಣಿ ಮಾಹಿತಿ ನೀಡಿದ್ದಾರೆ.


