ಮಡಿಕೇರಿ ಫೆ.15 : ಕೃಷಿ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಹಾಗೂ ಕೃಷಿ ಸಂಸ್ಕರಣೆ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50, ಪ.ಜಾತಿ ಮತ್ತು ಪ.ಪಂಗಡ ರೈತರಿಗೆ ಶೇ.90ರ ಸಹಾಯಧನದಡಿ ವಿತರಿಸುವ ಯಂತ್ರೋಪಕರಣಗಳಾದ ಪವರ್ ಟಿಲ್ಲರ್, ಸ್ವಯಂ ಚಾಲಿತ ಉಪಕರಣಗಳು, ಎಂಜಿನ್ ಮೋಟಾರ್ ಚಾಲಿತ ಉಪಕರಣಗಳು, ಸಣ್ಣ ಯಂತ್ರ ಚಾಲಿತ ಎಣ್ಣೆ ಗಾಣ ಹಾಗೂ ಇತರೆ ಉಪಕರಣಗಳ ಸವಲತ್ತುಗಳನ್ನು ಪಡೆಯಲು ಆಯಾಯ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳಾದ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಗಳು ಹಾಗೂ ಇತರೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ಆಯಾಯ ಹೋಬಳಿಯ ರೈತ ಸಂಪರ್ಕ ಕೇಂದ್ರ ಮತ್ತು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ತಿಳಿಸಿದ್ದಾರೆ.
ಮಡಿಕೇರಿ : ಪ್ರಸಕ್ತ(2022-23) ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90ರ ರಿಯಾಯಿತಿಯಲ್ಲಿ ಪವರ್ ಟಿಲ್ಲರ್, ರೋಟೋವೇಟರ್, ಕಳೆ ಕೊಚ್ಚುವ ಯಂತ್ರಗಳು (ಪವರ್ ವೀಡರ್), ಪವರ್ ಸ್ಪ್ರೇಯರ್ಸ್, ಡೀಸೆಲ್ ಪಂಪ್‍ಸೆಟ್, ಪ್ಲೋರ್ ಮಿಲ್ ಮೊಟೋಕಾರ್ಟ್, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು ಮತ್ತು ಇತರೆ ಹೈಟೆಕ್ ಕೃಷಿ ಉಪಕರಣಗಳನ್ನು ವಿತರಿಸಲಾಗುತ್ತದೆ.
ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ರೈತರು ಪಹಣಿ (ಆರ್‍ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಒಂದು ಬಾವಚಿತ್ರ, ರೂ.20ರ ಛಾಪಾ ಕಾಗದದೊಂದಿಗೆ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.














