ಮಡಿಕೇರಿ ಫೆ.19 : ಕೊಡಗು ಜಿಲ್ಲಾ ಬಂಟರ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.
ಬಿ.ಡಿ.ಜಗದೀಶ್ ರೈ ಅಧ್ಯಕ್ಷರಾಗಿರುವ ಸಂಘದಲ್ಲಿ ಗೌರವಾಧ್ಯಕ್ಷರಾಗಿ ಐತಪ್ಪ ರೈ, ಉಪಾಧ್ಯಕ್ಷರಾಗಿ ರವೀಂದ್ರ ರೈ ಬಿ.ಕೆ., ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜನಾರ್ದನ ಶೆಟ್ಟಿ, ಸಹಕಾರ್ಯದರ್ಶಿಯಾಗಿ ಹರೀಶ್ ರೈ ಕೂಟುಹೊಳೆ, ಬಿ.ಜೆ. ಮನೋಜ್ ಶೆಟ್ಟಿ, ಖಜಾಂಚಿಯಾಗಿ ರತ್ನಾಕರ ರೈ ಮೇಕೇರಿ, ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ವಿ. ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರ್ದೇಶಕರಾಗಿ ಶರತ್ ಶೆಟ್ಟಿ, ಸೀತಾರಾಮ ರೈ ಮಡಿಕೇರಿ, ಪ್ರಮೋದ್ ಕುಮಾರ್ ರೈ, ಬಿ.ಯು.ಚಂದ್ರಶೇಖರ್ ರೈ, ವಿಜಯಲಕ್ಷ್ಮೀ ಶೆಟ್ಟಿ, ರಾಜಮಣಿ ಶೆಟ್ಟಿ, ಕೆ.ಬಿ. ಹರೀಶ್ ಶೆಟ್ಟಿ, ಬಿ.ಬಿ. ದಿವೇಶ್ ರೈ, ಗಿರೀಶ್ ರೈ ಬಿ.ಕೆ. ಕೆದಮಳ್ಳೂರು, ಬಾಲಕೃಷ್ಣ ಅಪ್ಪು ರೈ, ಸುರೇಶ್ ರೈ ಗೋಣಿಕೊಪ್ಪ, ಅಶ್ವಿನಿ ಪುರುಷೋತ್ತಮ ರೈ, ಸಂಪತ್ ಶೆಟ್ಟಿ, ಪ್ರಭು ರೈ, ದಯಾನಂದ ರೈ ನೀಲುಮಾಡು, ಮನು ಆಳ್ವ ಭಾಗಮಂಡಲ, ಜಯರಾಮ್ ರೈ ಮೂರ್ನಾಡು, ಪ್ರದೀಪ್ ರೈ, ಬಿ.ಎಸ್. ಮದನ್ ಶೆಟ್ಟಿ, ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷರು ನಿರ್ದೇಶಕರಾಗಿರಲಿದ್ದಾರೆ.
ಖಾಯಂ ಆಹ್ವಾನಿತರಾಗಿ ಮಡಿಕೇರಿ ನಗರ ಮಹಿಳಾ ಘಟಕ ಅಧ್ಯಕ್ಷೆ ಸೌಮ್ಯ ಶೆಟ್ಟಿ, ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ ರೈ, ಸಲಹೆಗಾರರಾಗಿ ಕೊರಗಪ್ಪ ರೈ ಮಡಿಕೇರಿ, ಶೇಖರ್ ಶೆಟ್ಟಿ, ವೆಂಕಪ್ಪ ರೈ ಸಿದ್ದಾಪುರ ಇವರನ್ನು ಆಯ್ಕೆ ಮಾಡಲಾಗಿದೆ.