ಸುಂಟಿಕೊಪ್ಪ ಫೆ.21 : ಕಾಜೂರು ಹರಿಹರ ಯುವಕ ಸಂಘದ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವವನ್ನು ಕಾಫಿ ಬೆಳೆಗಾರರಾದ ಕಂಬೆಯಂಡ ಸೀತಾಲಕ್ಷ್ಮಿ ಅಪ್ಪಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕಾರ್ಯಕ್ರಮದ ಯಶಸ್ಸಿಗೆ ಶುಭಹಾರೈಸಿದರು.
ಜಿ.ಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಮಾತನಾಡಿ, ಹರಿಹರ ಯುವಕ ಸಂಘದ ಕಟ್ಟಡಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.5 ಲಕ್ಷ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಕೆ.ಅವಿಲಾಷ್ ವಹಿಸಿದ್ದರು. ಗ್ರಾ.ಪಂ. ಸದಸ್ಯ ವಿನೋದ್, ಬೆಳೆಗಾರರಾದ ಕೆ.ಕೆ.ಅಯ್ಯಪ್ಪ, ಡಿ.ಡಿ.ಬೆಳ್ಯಪ್ಪ, ಎಸ್.ಎನ್.ಯೋಗೇಶ್, ಬಾರನ ಪ್ರಮೋದ್, ಸಂಘದ ಮಾಜಿ ಅಧ್ಯಕ್ಷ ಎಂ.ಕೆ.ತಮ್ಮಯ್ಯ, ಪ್ರಮುಖರಾದ ಗೋಪಾಲಕೃಷ್ಣ, ಬಿ.ಬಿ.ಭರತ್, ಎಂ.ಕೆ.ಶಿವರಾಂ, ಟಿ.ಆರ್.ವಿಜಯ, ಟಿ.ವಿ.ಶಶಿ, ಎಂ.ಕೆ.ಮೋಹನ ಹಾಗೂ ಪ್ರಮೋದ್ ಹಾಜರಿದ್ದರು.
ಎಂ.ಕೆ.ಮೋಹನ್ ಕಾರ್ಯಕ್ರಮ ನಿರೂಪಿಸಿ, ಟಿ.ಆರ್.ವಿಜಯ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ, ಕಣ್ಣುಕಟ್ಟಿ ಮಡಿಕೆ ಒಡೆಯುವುದು, ಹಿರಿಯ ನಾಗರಿಕರಿಗೆ ಬಾಂಬ್ ಇನ್ ದಿ ಸೀಟಿ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು.









