ಚೆಯ್ಯಂಡಾಣೆ, ಫೆ.21. ನರಿಯಂದಡ ಗ್ರಾ.ಪಂ ಗೆ ಒಳಪಟ್ಟ ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಚೇಲಾವರದ ಕಬ್ಬೆ ಜಲಪಾತ ಹಾಗೂ ಸಮೀಪದ ಬೆಟ್ಟ ಪ್ರದೇಶದಲ್ಲಿ ತಮಾರಾ ರೆಸಾರ್ಟ್ ವತಿಯಿಂದ ಸ್ವಚ್ಛತಾ ಶ್ರಮದಾನ ನಡೆಯಿತು.
ಚೇಲಾವರದ ಕಬ್ಬೆ ಜಲಪಾತಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಬಾಟಲಿಗಳನ್ನು ಅಲ್ಲೇ ಬಿಟ್ಟು ತೆರಳಿದ್ದನ್ನು ಮನಗಂಡು ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಸಿಬ್ಬಂದಿಗಳು
ಸುಮಾರು 13 ಕ್ಕೂ ಹೆಚ್ಚು ಚೀಲ ಕಸ, ಪ್ಲಾಸ್ಟಿಕ್,ಬಾಟಲಿಗಳನ್ನು ಸಂಗ್ರಹಿಸಿ, ರೆಸಾರ್ಟ್ ಗೆ ತಂದು ವಿಲೇವಾರಿ ಮಾಡಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ತಮಾರಾ ರೆಸಾರ್ಟ್ ನ ವ್ಯವಸ್ಥಾಪಕರಾದ ಕೃಷ್ಣ ಕುಮಾರ್ ಬಾಜ್ ಪೈ ಹಾಗೂ ಗಿರೀಶ್ ಸುಬ್ಬಯ್ಯ ವಹಿಸಿದರು.
ಈ ಸಂದರ್ಭ ರೆಸಾರ್ಟ್ ನ ನೀತು ಬೋಪ್ಪಣ್ಣ, ಶಾಮ್ ಸಾಜಿ ರಾಮ್, ಡಾಕ್ಟರ್ ಸುನೀತಾ, ಅಂಜಿತ್, ಚಂಗಪ್ಪ ಹಾಗೂ ಸಿಬ್ಬಂದಿಗಳು ಮತ್ತಿತರರು ಇದ್ದರು.
ವರದಿ :ಅಶ್ರಫ್