ಮಡಿಕೇರಿ ಫೆ.22 : ಬ್ರೈನೋಬ್ರೈನ್ ಇಂಟರ್‌ನ್ಯಾಷನಲ್ ದುಬೈ ವತಿಯಿಂದ ಆಯೋಜಿಸಲಾಗಿದ್ದ 9ನೇ ಅಂತರರಾಷ್ಟ್ರೀಯ ಆನ್‌ಲೈನ್ ಬ್ರೈನೋಬ್ರೈನ್ -2023 ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಸಂಸ್ಥೆಯ ವಿದ್ಯಾರ್ಥಿಗಳು ಚಾಂಪಿಯನ್ ಟ್ರೋಫಿ, ಚಿನ್ನ ಮತ್ತು ಬೆಳ್ಳಿ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದಿoದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ಒಟ್ಟು 44 ವಿದ್ಯಾರ್ಥಿಗಳು ಭಾಗವಹಿಸಿ ಕೇವಲ 4 ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತಿ ಚುರುಕಾಗಿ ಮಾಡುವ ಮೂಲಕ 17 ಚಾಂಪಿಯನ್ ಟ್ರೋಫಿ, 12 ಚಿನ್ನದ ಪದಕ ಮತ್ತು 15 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
::: ಚಾಂಪಿಯನ್ ಟ್ರೋಫಿ ವಿಜೇತರು :::
ಬಿ.ಎಂ.ಆರವ್ ಬೋಪಣ್ಣ, ಎಸ್.ಐಶ್ವರ್ಯ, ಆನ್‌ಶೀಲ್ ಲೋಬೊ, ಅಪೇಕ್ಷಾ ಆರ್ ರೈ, ಎನ್.ಕೆ.ಚಹನಾ, ಚಿರಂತನ್ ಆರ್ ಕಾಮತ್, ದೃತಿ ಜೆ ಪೂಜಾರಿ, ಹೆಚ್.ಎಸ್.ಹವಿಂತಾ, ಪಿ.ಕೆ.ಕೃಷ್ಣ ಪ್ರಿಯಾ, ಆರ್.ಕೃಪಾ, ಡಿ.ಎಂ.ಮೀನಾಕ್ಷಿ, ಎನ್. ನಿರನ್ ಪೂವಣ್ಣ, ನಾಪಂಡ ನಿಶಾ ಪೂವಣ್ಣ, ನೈಷಾ ನಾಚಯ್ಯ ಪಾಲೆಕಂಡ, ಎಸ್.ಪಿ.ಪ್ರಣತಿ, ಬಿ.ಪಿ.ರಕ್ಷ್ ಪೊಣ್ಣನ್ನ, ಬಿ.ಎಸ್.ತನ್ಮಯ್ ಚಾಂಪಿಯನ್ ಟ್ರೋಫಿ ಪಡೆದುಕೊಂಡಿದ್ದಾರೆ.
::: ಚಿನ್ನದ ಪದಕ ವಿಜೇತರು :::
ಟಿ.ಬಿ.ಅಫ್ಘಾನ್ ಅಹಮ್ಮದ್, ಪಿ.ಅನ್ವಿ, ಹೆಚ್.ಜೆ.ಚೇತಸ್ , ಎ.ಎಂ.ಧೃತಿ, ಎ.ಎಂ.ಧ್ರುವನ್, ಡಬ್ಲ್ಯೂ.ವಿ.ಕುನಾಲ್ ಪ್ರಸಾದ್, ಪ್ರತ್ಯೂಶ ಎಂ.ಸುವರ್ಣ, ಟಿ.ಎಂ.ಪ್ರೀತ, ಪಿ.ಎಂ.ಪುನೀತ, ರೂಬೆನ್ ಜೆಸ್ವಿನ್ ಸೆಲ್ವನ್, ಎಂ.ಎಲ್.ರೂಪಲ್ ಮುತ್ತಮ್ಮ, ಎ.ವೈ.ತ್ರಿಶಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
::: ಬೆಳ್ಳಿ ಪದಕ ವಿಜೇತರು :::
ಅಯಾನ್ ನಾಯ್ಡು, ಡಿ.ಎನ್.ದೀಷ್ಣಾ, ಎಂ.ಸಿ.ಗೌರವ್, ಕುನಾಲ್ ರಾಜ್, ಕೆ.ಸಿ.ಲಾಸ್ಯ, ಕೆ.ಸಿ.ಲಕ್ಷ್ಯ, ಬಿ.ಎಂ.ಮಾನವಿ, ಡಿ.ಎ.ಮುಹಮ್ಮದ್ ಅಧಿಯಾನ್, ಎಂ.ಎನ್. ನೀಲ್, ಎಂ.ಎಸ್.ನಿತೀಶ್, ನುಷ್ಕ ಕೊಡೆಂದೆರ, ಎಂ.ವಿ.ಪೂರ್ವಿತ್, ಡಬ್ಲ್ಯೂ.ವಿ.ಶಾನ್ವಿಕಾ, ಟಿ.ಪಿ.ನಿಧಿ, ಟಿ.ಪಿ.ನಿತ್ಯ ಬೆಳ್ಳಿ ಪದಕವನ್ನು ಪಡೆದುಕೊಂಡರು.
ಸ್ಪರ್ಧೆಯಲ್ಲಿ 84 ರಾಷ್ಟ್ರಗಳ ಒಟ್ಟು 20,603 ಮಕ್ಕಳು ವಿವಿಧ ರಾಷ್ಟ್ರದ ಬ್ರೈನೋಬ್ರೈನ್ ಕೇಂದ್ರಗಳಿಂದ ಭಾಗವಹಿಸಿದ್ದು, 4 ನಿಮಿಷಗಳ ಬ್ರೈನೋಬ್ರೈನ್ ಆನ್‌ಲೈನ್ ಸ್ಪರ್ಧೆಯಲ್ಲಿ ಲ್ಯಾಪ್‌ಟಾಪ್, ಡೆಸ್ಕ್ಟಾಪ್ ಉಪಯೋಗಿಸಿ ಭಾಗವಹಿಸುವ ಸಂದರ್ಭದಲ್ಲಿ ಉಂಟಾಗುವ ಹಲವಾರು ತಾಂತ್ರಿಕ ದೋಷಗಳ ನಡುವೆಯು ಉತ್ತಮ ಪ್ರದರ್ಶನ ತೋರುವ ಮೂಲಕ ಭಾಗವಹಿಸಿದ ಎಲ್ಲಾ 44 ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರು ವಿದ್ಯಾರ್ಥಿಗಳ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಶಂಸೆ ಮತ್ತು ಅಭಿನಂದನೆ ಮಕ್ಕಳು ಹಾಗೂ ಪೋಷಕರಿಗೆ ಸಲ್ಲಬೇಕು ಎಂದಿದ್ದಾರೆ.
Breaking News
- *ಕನ್ನಡ ಸಾಹಿತ್ಯ ಭವನ ನಿರ್ಮಾಣ : ಅಗತ್ಯ ಸಹಕಾರಕ್ಕೆ ಕೊಡಗು ಜಿಲ್ಲಾ ಕ.ಸಾ.ಪ ಮನವಿ*
- *ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ‘ಅರೆ ವಿಶೇಷ ಕೊಠಡಿ’ ಉದ್ಘಾಟನೆ : ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೌಲಭ್ಯ ದೊರೆಯಲಿ : ಶಾಸಕ ಡಾ.ಮಂತರ್ ಗೌಡ*
- *ಬೃಹತ್ ಭೂಪರಿವರ್ತನೆ, ಭೂವಿಲೇವಾರಿ, ಲೇಔಟ್, ಮೆಗಾ ಟೌನ್ಶಿಪ್ಗೆ ವಿರೋಧ : ಕಡಂಗದಲ್ಲಿ ಸಿಎನ್ಸಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
- *ಡಿ.8 ರಂದು ಮಡಿಕೇರಿಯಲ್ಲಿ ಸಂಸದರ ನೂತನ ಕಚೇರಿ ಆರಂಭ*
- *ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ*
- *ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*
- *ಕರಿಕೆ ಬಿಜೆಪಿ ಶಕ್ತಿ ಕೇಂದ್ರಕ್ಕೆ ಪದಾಧಿಕಾರಿಗಳ ಆಯ್ಕೆ*
- *ವೀರ ಸೇನಾನಿಗಳಿಗೆ ಅಗೌರವ : ಡಿ.6ರಂದು ಮಡಿಕೇರಿಯಲ್ಲಿ ಮಾಜಿ ಸೈನಿಕರಿಂದ ಪ್ರತಿಭಟನೆ*
- *‘ಸ್ವಾಭಿಮಾನಿ’ ಸಮಾವೇಶದಲ್ಲಿ ಕೊಡಗಿನಿಂದ 8 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ*
- *ಚೇಶೈರ್ ಹೋಮ್ ಶಾಲೆಯ ಮುಖ್ಯಶಿಕ್ಷಕ ಶಿವರಾಜ್ ಗೆ ಸನ್ಮಾನ*