ವಿರಾಜಪೇಟೆ ಫೆ.23 : ಅಮ್ಮತಿ ಸಮೀಪದ ಪುಲಿಯೇರಿ ಗ್ರಾಮದ ಭಗವತಿ ದೇವಾಲಯದ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಅಮ್ಮತಿ ಗ್ರಾ.ಪಂ ವ್ಯಾಪ್ತಿಯ ಪುಲಿಯೇರಿ ಗ್ರಾಮದ ಶ್ರೀ ಭಗವತಿ ದೇವಿಯ ವಾರ್ಷಿಕ ಉತ್ಸವ ಫೆ.18 ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಪ್ರಾರಂಭವಾಗಿ
ದೇವಿಯ ಜಳಕದ ಮೂಲಕ ತೆರೆಕಂಡಿತು.
ಐದು ದಿನಗಳ ಕಾಲ ನಡೆದ ಉತ್ಸವದಲ್ಲಿ ದಿನನಿತ್ಯ ಗಣಪತಿ ಹೋಮ, ಉಷ ಪೂಜೆ, ಭ್ರಹ್ಮಕಲಶ ಪೂಜೆ ಮಹಾಮಂಗಳರತಿ, ಸಂಜೆ ದೀಪಾರಾಧನೆ, ಭಗವತಿ ಸೇವೆ, ರಾತ್ರಿ ಪೂಜೆ ಸಲ್ಲಿಸಲಾಯಿತು.
ಕೊನೆದಿನ ಮಾಹಾ ಪೊಂಗಾಲ, ಮಾಹಾ ಪೊಂಗಾಲ, ನೈವೆದ್ಯ ಸಮರ್ಪಣೆ, ಬ್ರಹ್ಮ ಕಳಶ ಪೂಜೆ, ಮಾಹಾಪೂಜೆ ಸಲ್ಲಿಸಲಾಯಿತು. ಸಂಜೆ ಕಾವೇರಿ ನದಿಯಿಂದ ದೇವಿಯ ವಿಗ್ರಹ ಮೆರೆವಣಿಗೆ, ದೇವಿಯ ದೀಪಾರಾಧನೆ, ರಾತ್ರಿ ಮಾಹಾಪೂಜೆಯ ಬಳಿಕ ಅನ್ನಸಂತರ್ಪಣೆ ಸೇವೆ ನಡೆಯಿತು.
ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಮುಂಗುಯಿಯಿಲ್ ಕುಟುಂಬದ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಕೇರಳದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾಧಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ