ಕೊತ್ತುಂಬರಿ (ಕೋರಿಯಾಂಡರ್ ಸ್ಯಾಟಿವಮ್ ) ಎನ್ನುವುದು ಏಪಿಯಾಸಿಯೇ ಕುಟುಂಬದ ವಾರ್ಷಿಕ ಬೆಳವಣಿಗೆಯ ಔಷಧೀಯ ಸಸ್ಯವಾಗಿದೆ. ಸಸ್ಯದ ಎಲ್ಲಾ ಭಾಗಗಳು ಸೇವಿಸುವಂತಹುದಾಗಿದೆ. ಆದರೆ ಅಡುಗೆಯಲ್ಲಿ ಬಹು ಸಾಮಾನ್ಯವಾಗಿ ಹಸಿ ಎಲೆಗಳು ಮತ್ತು ಒಣಗಿದ ಬೀಜಗಳ ಭಾಗಗಳನ್ನು ಬಳಸಲಾಗುತ್ತದೆ. ಕೊತ್ತುಂಬರಿಯನ್ನು ಮಧ್ಯ ಪ್ರಾಚ್ಯ, ಮಧ್ಯ ಏಷ್ಯಾ, ಮೆಡಿಟರೇನಿಯನ್, ಭಾರತ, ದಕ್ಷಿಣ ಏಷ್ಯಾ, ಮೆಕ್ಸಿಕನ್, ಟೆಕ್ಸಾನ್, ಲ್ಯಾಟಿನ್ ಅಮೇರಿಕನ್, ಚೈನೀಸ್, ಆಫ್ರಿಕನ್ ಮತ್ತು ಆಗ್ನೇಯ ಏಷ್ಯಾ ಪ್ರದೇಶದ ಖಾದ್ಯಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.
ಆರೋಗ್ಯದ ಪರಿಣಾಮಗಳು ಮತ್ತು ವೈದ್ಯಕೀಯ ಬಳಕೆಗಳು
ಇತರ ಅನೇಕ ಉಪಜಾತಿಯ ಸಸ್ಯಗಳಂತೆ ಕೊತ್ತುಂಬರಿಯು ಆಂಟಿಆಕ್ಸಿಡಾಂಟ್ಗಳನ್ನು ಒಳಗೊಂಡಿದ್ದು, ಇದನ್ನು ಈ ಸಾಂಬಾರು ಪದಾರ್ಥದೊಡನೆ ಮಿಶ್ರ ಮಾಡಿದಲ್ಲಿ ಆಹಾರ ವಸ್ತುಗಳ ಹಾಳಾಗುವಿಕೆಯನ್ನು ತಪ್ಪಿಸುತ್ತದೆ ಅಥವಾ ವಿಳಂಬಗೊಳಿಸುತ್ತದೆ. ಎಲೆಗಳು ಮತ್ತು ಬೀಜಗಳೆರಡೂ ಆಂಟಿಆಕ್ಸಿಡಾಂಟ್‌ಗಳನ್ನು ಒಳಗೊಂಡಿರುವುದಾಗಿ, ಆದರೆ ಎಲೆಗಳು ಹೆಚ್ಚು ಬಲವಾದ ಪರಿಣಾಮವನ್ನು ಹೊಂದಿರುವುದಾಗಿ ಅಧ್ಯಯನದಲ್ಲಿ ಕಂಡು ಬಂದಿದೆ.
ಕೊತ್ತುಂಬರಿ ಎಲೆಗಳಿಂದ ಪಡೆದ ರಾಸಾಯನಿಕಗಳು ಸಾಲ್ಮೋನೆಲ್ಲಾ ಕೋಲೆರಾಸೂಸ್ ವಿರುದ್ಧ ಬ್ಯಾಕ್ಟ್ರೀರಿಯಾ ನಿರೋಧಕ ಚಟುವಟಿಕೆಯನ್ನು ಹೊಂದಿರುವುದಾಗಿ ಕಂಡು ಬಂದಿದ್ದು, ಮತ್ತು ಈ ಚಟುವಟಿಕೆಯು ಈ ರಾಸಾಯನಿಕಗಳ ಭಾಗದಲ್ಲಿ ಅಯಾನಿಕವಲ್ಲದ ಸರ್ಫಾಕ್ಟಂಟ್ಗಳಂತೆ ಕಾರ್ಯನಿರ್ವಹಿಸುವ ಮೂಲಕ ಪರಿಣಾಮ ಬೀರಿರುವುದಾಗಿಯೂ ಕಂಡು ಬಂದಿದೆ.
ಕೊತ್ತುಂಬರಿಯನ್ನು ಇರಾನಿನಲ್ಲಿ ಉದ್ವೇಗ ಮತ್ತು ನಿದ್ರಾಹೀನತೆಗೆ ಪರಿಹಾರವಾಗಿ ಸಾಂಪ್ರದಾಯಿಕ ಔಷಧಿಯಾಗಿ ಬಳಸಲಾಗುತ್ತಿದೆ. ಇಲಿಗಳ ಬೆಂಬಲದ ಪ್ರಯೋಗದಲ್ಲಿ ಇದನ್ನು ಆಂಕ್ಸಿಯೋಲಿಟಿಕ್ ಆಗಿ ಬಳಸಲಾಗುತ್ತದೆ.
ಸಾಂಪ್ರದಾಯಿಕ ಭಾರತೀಯ ಔಷಧದದಲ್ಲಿ ಸಮ ಪ್ರಮಾಣದ ಕೊತ್ತುಂಬರಿ ಮತ್ತು ಜೀರಿಗೆಯನ್ನು ಕುದಿಸುವುದರ ಮೂಲಕ ಹಾಗೂ ತದನಂತರ ದೊರೆಯುವ ದ್ರಾವಣವನ್ನು ತಣ್ಣಗೆ ಮಾಡಿ ಸೇವಿಸುವ ಮೂಲಕ ಮೂತ್ರವರ್ಧಕವಾಗಿ ಬಳಸಲಾಗುತ್ತದೆ. ನಿಸರ್ಗ ಮತ್ತು ಸಾಂಪ್ರದಾಯಿಕ ಔಷಧದದಲ್ಲಿ, ಇದನ್ನು ವಾಯುಹಾರಿಯಾಗಿ ಮತ್ತು ಜೀರ್ಣಕಾರಕವಾಗಿ ಬಳಸಲಾಗುತ್ತದೆ.
ಕೊತ್ತುಂಬರಿಯನ್ನು ಮಧುಮೇಹಕ್ಕೆ ಸಾಂಪ್ರದಾಯಿಕ ಚಿಕಿತ್ಸೆಯಾಗಿ ದಾಖಲಿಸಲಾಗಿದೆ. ಇಲಿಗಳ ಮೇಲೆ ನಡೆಸಿದ ಅಧ್ಯಯನವು ಕೊತ್ತುಂಬರಿಯ ಸಾರವು ಇನ್ಸುಲಿನ್ ಬಿಡುಗಡೆ ಮಾಡುವ ಮತ್ತು ಇನ್ಸುಲಿನ್‍ನಂತಹ ಚಟುವಟಿಕೆಯನ್ನು ಹೊಂದಿದೆ ಎಂದು ಸಾಬೀತು ಪಡಿಸಿದೆ.
ಕೊತ್ತುಂಬರಿಯು ಗಮನಾರ್ಹ ಪ್ರಮಾಣದ ಹೈಪೋಲಿಪಿಡೆಮಿಕ್ ಪರಿಣಾಮವನ್ನು ಹೊಂದಿರುವುದಾಗಿ ಮತ್ತು ಇದು ಒಟ್ಟಾರೆ ಕೊಲೆಸ್ಟರಾಲ್ ಮತ್ತು ಟ್ರೈಗ್ಲೈಸೆರೈಡ್ಸ್ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಮತ್ತು ಹೆಚ್ಚು ಸಾಂದ್ರತೆ ಯ ಲಿಪೋಪ್ರೋಟೀನ್ ಪ್ರಮಾಣದ ಹೆಚ್ಚುವಿಕೆಯಲ್ಲಿ ಪರಿಣಾಮವನ್ನು ಹೊಂದಿದೆ ಎಂದು ಕಂಡು ಬಂದಿದೆ.
ಈ ಪರಿಣಾಮವು ಯಕೃತ್ತಿನಿಂದ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮತ್ತು ಕೊಲೆಸ್ಟರಾಲ್ ಅನ್ನು ಇತರ ಘಟಕಗಳಾಗಿ ವಿಭಜಿಸುವುದನ್ನು ಹೆಚ್ಚಿಸುವುದರಿಂದ ಕಾರಣವಾಗುತ್ತದೆ ಎಂದು ಕಂಡು ಬಂದಿದೆ.
ಕೊತ್ತುಂಬರಿ ಜ್ಯೂಸ್ ಅನ್ನು (ಅರಿಶಿನ ಪುಡಿ ಅಥವಾ ಪುದೀನ ಜ್ಯೂಸ್‌ನೊಂದಿಗೆ ಮಿಶ್ರಣದಲ್ಲಿ) ಮೊಡವೆಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ ಮತ್ತು ಕಾಂತಿಯನ್ನು ಬರಿಸಲು ಮುಖಕ್ಕೆ ಲೇಪಿಸಲಾಗುತ್ತದೆ ಕೊತ್ತುಂಬರಿಯು ಹಲವು ಜನರಲ್ಲಿ ಅಲರ್ಜಿಯ ಪರಿಣಾಮವನ್ನು ಉಂಟು ಮಾಡ ಬಹುದು.
ಕೊತ್ತಂಬರಿ ಸೊಪ್ಪಿನ ಬಳಕೆಯು ಜೀರ್ಣಾಂಗ ವ್ಯವಸ್ಥೆಯನ್ನು ಗುಣಪಡಿಸಲು ಪ್ರಯೋಜನಕಾರಿಯಾಗಿದೆ. ಎಎನ್‌ಸಿಬಿಐ (ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್) ವೆಬ್‌ಸೈಟ್‌ನಲ್ಲಿ ಈ ಕುರಿತು ಪ್ರಕಟವಾದ ಸಂಶೋಧನೆಯಲ್ಲಿ ಇದು ದೃಢಪಟ್ಟಿದೆ. ಕೊತ್ತಂಬರಿ ಸೇವನೆಯು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. ಇದು ಲಿನೂಲ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಇದು ಕಾರ್ಮಿನೇಟಿವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರ ಆಧಾರದ ಮೇಲೆ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಕೊತ್ತಂಬರಿ ಸೊಪ್ಪನ್ನು ಉಪಯುಕ್ತವೆಂದು ಪರಿಗಣಿಸಬಹುದು.