ಬಿಳಿಕಲ್ ರಂಗನಾಥ ಸ್ವಾಮಿ ಬೆಟ್ಟವು ಭಾರತದ ಕರ್ನಾಟಕ ಕನಕಪುರ ಪಟ್ಟಣದ ಸಮೀಪವಿರುವ ಬೆಟ್ಟವಾಗಿದೆ. ಇದು ಬೆಂಗಳೂರು ನಗರದ ದಕ್ಷಿಣಕ್ಕೆ 70ಕಿಲೋ ಮೀಟರ್ ಹಾಗೂ ಕನಕಪುರ ತಾಲೂಕಿನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಬೆಟ್ಟದ ಮೇಲೆ ರಂಗನಾಥ ಸ್ವಾಮಿಯ ದೇವಸ್ಥಾನವಿದೆ. ಪಕ್ಕದಲ್ಲಿ ಬೃಹತ್ ಗ್ರಾನೈಟ್ ಬಂಡೆಯ ಸಾಲುಗಳಿವೆ. ಈ ದೇವಾಲಯವು ದೊಡ್ಡದಾದ ಗ್ರಾನೈಟ್ ಬಂಡೆಯ ಕೆಳಗೆ ಇದೆ. ಈ ಬೆಟ್ಟವನ್ನು ಬಿಳಿಕಲ್ ಬೆಟ್ಟ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಏಕೆಂದರೆ ಬೆಟ್ಟದ ಸಮೀಪವಿರುವ ಬಿಳಿಕಲ್ಲುಗಳು ಬಹಳ ದೂರದಿಂದಲೇ ಕಾಣಿಸುತ್ತದೆ. ಈ ಶಿಖರವು 3780ಅಡಿ (1152 ಮೀ) ಎತ್ತರದಲ್ಲಿದೆ.
ಜೀವವೈವಿಧ್ಯ :: ಬಿಳಿಕಲ್ ರಂಗಸ್ವಾಮಿ ಬೆಟ್ಟವು ಅರಣ್ಯ ಮೀಸಲು ಪ್ರದೇಶಕ್ಕೆ ಸೇರಿದ್ದು ಹಾಗೂ ಪೊದೆಸಸ್ಯ/ಕುರುಚಲು ಗಿಡಗಳಿಂದ ಕೂಡಿದೆ. ಈ ಕಾಡುಗಳಲ್ಲಿ ಆನೆಗಳು ಮತ್ತು ಇತರೆ ವನ್ಯಜೀವಿ ಪ್ರಾಣಿಗಳನ್ನು ಕಾಣಬಹುದು. ಸಮೃದ್ಧ ಸಸ್ಯವರ್ಗ ಎತ್ತರವಾದ ಬೆಟ್ಟಗಳ ವಿಶಿಷ್ಟವಾಗಿದೆ. ವಿಶೇಷವಾಗಿ ಮಳೆಗಾಲದ ನಂತರ ಇಲ್ಲಿನ ಸಸ್ಯವರ್ಗವು ಸಾಕಷ್ಟು ದಟ್ಟವಾಗಿರುತ್ತದೆ. ಈ ಕಾಡುಗಳು ಸ್ಥಳೀಯವಾಗಿರುವ ವನ್ಯಜೀವಿಗಳಿಗೆ ಮತ್ತು ಪಕ್ಕದ ಕಾಡುಗಳಿಂದ ಬರುವ ಆನೆಗಳಿಗೆ ಆಶ್ರಯ ನೀಡುತ್ತದೆ. ಬೆಟ್ಟದ ಮೇಲ್ಬಾಗದಿಂದ ನಿಂತು ನೋಡಿದಾಗ ಸುತ್ತಮುತ್ತಲಿನ ಬೆಟ್ಟಗಳಿಂದ ಕೂಡಿರುವ ಕನಕಪುರವನ್ನು ನೋಡಬಹುದು. ಈ ಸ್ಥಳದ ದೇವರ ಮಹಿಮೆಯನ್ನು ಸಾರುವ ಸಲುವಾಗಿ ಈ ಬೆಟ್ಟದ ಮೇಲ್ಭಾಗದಲ್ಲಿ ವರ್ಷಕ್ಕೊಮ್ಮೆ ಜನವರಿ 14 ರಂದು ರಂಗನಾಥ ಸ್ವಾಮಿಯ ಉತ್ಸವನ್ನು ನಡೆಸಲಾಗುತ್ತದೆ.ಬೆಟ್ಟಕ್ಕೆ ಚಾರಣ ಹೋಗಬಯಸುವವರು ಕನಕಪುರದ ಮಾರ್ಗವಾಗಿ ಪ್ರವೇಶಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಓಡಾಡುತ್ತದೆ. ಹಾಗಾಗಿ ಸಂಚರಿಸುವಾಗ ಎಚ್ಚರಿಕೆಯಿಂದ ಇರಬೇಕು.