ಬೇಕಾಗುವ ಪದಾರ್ಥಗಳು : ಚಿಕನ್ ಕೈಮಾ – 250 ಗ್ರಾಂ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಶುಂಠಿ ಪೇಸ್ಟ್ – 1 ಚಮಚ, ಕಾಳು ಮೆಣಸಿನ ಪುಡಿ – ಕಾಲು ಚಮಚ, ಅಚ್ಚ ಖಾರದ ಪುಡಿ – ಕಾಲು ಚಮಚ, ಉಪ್ಪು – ಕಾಲು ಚಮಚ, ಗರಂ ಮಸಾಲೆ ಪುಡಿ – ಅರ್ಧ ಚಮಚ, ದನಿಯಾ ಪುಡಿ – 1 ಚಮಚ, ನಿಂಬೆ ರಸ – ಸ್ವಲ್ಪ, ಕಡಲೆ ಹಿಟ್ಟು – 2 ಚಮಚ, ಮೈದಾ ಹಿಟ್ಟು – 2 ಚಮಚ, ಉಪ್ಪು – ಕಾಲು ಚಮಚ, ಎಣ್ಣೆ – ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ : ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಅನ್ನು ತೆಗೆದುಕೊಂಡು, ಅದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಕಾಳು ಮೆಣಸಿನ ಪುಡಿ, ಅಚ್ಚ ಖಾರದ ಪುಡಿ, ಉಪ್ಪು, ಗರಂ ಮಸಾಲೆ, ದನಿಯಾ ಪುಡಿ, ನಿಂಬೆ ರಸ ಹಾಕಿ ಮಿಶ್ರಣ ಮಾಡಿ. ಮಸಾಲೆ ಮಿಶ್ರಿತ ಚಿಕನ್ 1 ಗಂಟೆಗಳ ಕಾಲ ನೆನೆಯಲು ಬಿಡಿ. ಈ ನಡುವೆ ಮತ್ತೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಮೈದಾ ಹಿಟ್ಟು, ಖಾರದ ಪುಡಿ ಹಾಗೂ ಉಪ್ಪು ಹಾಕಿ, ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಈಗಾಗಲೇ 1 ಗಂಟೆ ಕಾಲ ನೆನೆಸಿದ ಚಿಕನ್ ತೆಗೆದುಕೊಂದು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಡೀಪ್ ಫ್ರೈಗೆ ಕಡಾಯಿಯಲ್ಲಿ ಎಣ್ಣೆ ಹಾಕಿ, ಬಿಸಿ ಮಾಡಿ. ಚಿಕನ್ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು, ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಎಣ್ಣೆಯಲ್ಲಿ ಬಿಟ್ಟು ಕರಿಯಿರಿ. ಚಿಕನ್ ಚೆನ್ನಾಗಿ ಬೆಂದು, ಪಕೋಡಾ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯು ಪೇಪರ್ ಮೇಲೆ ಹರಡಿ. ಇದೀಗ ರುಚಿಕರವಾದ ಚಿಕನ್ ಪಕೋಡಾ ಸವಿಯಲು ಸಿದ್ಧ.