ರಂಗೋಲಿ ಹಾಕುವುದು ಒಂದು ಕಲೆ ಮತ್ತು ಇದನ್ನು ಹವ್ಯಾಸವಾಗಿಯೂ ರೂಪಿಸಿಕೊಂಡವರಿದ್ದಾರೆ. ರಂಗೋಲಿಯನ್ನು ಹಾಕುವಾಗ ಮನಸ್ಸಿನಲ್ಲಿ ಧನಾತ್ಮಕ ಭಾವನೆ ಮೂಡುತ್ತದೆ. ಮತ್ತು ಇದು ನಮ್ಮ ಒತ್ತಡವನ್ನು ಕಡಿಮೆಯಾಗಿಸುತ್ತದೆ.
ರಂಗೋಲಿ ಹಾಕುವಾಗ, ಬೆರಳು ಮತ್ತು ಹೆಬ್ಬೆರಳು ಒಟ್ಟಾಗಿ ಜ್ಞಾನಮುದ್ರೆಯನ್ನು ರೂಪಿಸುತ್ತದೆ, ಇದು ಮೆದುಳನ್ನು ಶಕ್ತಿಯುತವಾಗಿಸುವಲ್ಲಿ, ಸಕ್ರಿಯಗೊಳಿಸುವಲ್ಲಿ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಧನಾತ್ಮಕ ಶಕ್ತಿಯ ಸಂಕೇತ:
ವಿವಿಧ ಬಣ್ಣಗಳು ಮತ್ತು ಹೂವುಗಳಿಂದ ಮಾಡಿದ ರಂಗೋಲಿಯು ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ, ಇದು ಮನಸ್ಸನ್ನು ಸಂತೋಷಪಡಿಸುತ್ತದೆ ಮತ್ತು ವಾತಾವರಣವು ತುಂಬಾ ಧನಾತ್ಮಕವಾಗಿರುತ್ತದೆ. ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಸಿರಿ, ಸಮೃದ್ಧಿಯ ಸಂಕೇತ:
ಭಾರತದಲ್ಲಿ ರಂಗೋಲಿಯನ್ನು ವಿಶೇಷವಾಗಿ ಹೋಳಿ, ದೀಪಾವಳಿ, ನವದುರ್ಗಾ ಹಬ್ಬ, ಮಹಾಶಿವರಾತ್ರಿ ಹಾಗೂ ಇನ್ನಿತರ ಹಬ್ಬದ ದಿನದಂದು ಹಾಕಲಾಗುತ್ತದೆ. ರಂಗೋಲಿಯನ್ನು ಸಿರಿ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಲಕ್ಷ್ಮಿಯ ಆಗಮನದ ಸಂಕೇತ:
ಪ್ರತಿದಿನ ಮನೆಯ ಮುಂದೆ ಬಣ್ಣ ಬಣ್ಣದ ಸುಂದರವಾದ ರಂಗೋಲಿಯನ್ನು ಹಾಕುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯು ಆ ಮನೆಯಲ್ಲಿ ನೆಲೆಸುತ್ತಾಳೆ ಎನ್ನುವ ನಂಬಿಕೆಯಿದೆ. ರಂಗೋಲಿಯು ಲಕ್ಷ್ಮಿ ದೇವಿಯ ಸಂಕೇತವಾಗಿದೆ.
ಮನೆಯಿಂದ ದೋಷವನ್ನು ತೊಡೆದುಹಾಕುವುದು:
ನಂಬಿಕೆಯ ಪ್ರಕಾರ, ರಂಗೋಲಿಯ ಆಕೃತಿಗಳು ದುಷ್ಟಶಕ್ತಿಗಳನ್ನು ಮತ್ತು ದೋಷಗಳನ್ನು ಮನೆಯಿಂದ ದೂರವಿಡುತ್ತವೆ.