ಮಡಿಕೇರಿ ಮಾ.2 : ಬೆಂಗಳೂರಿನ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕೊಡಗಿನ ಕನ್ನಂಡಬಾಣೆಯ ಪಿ.ಎಂ.ಕೌಶಿಕ್ ಎಂಜಿನಿಯರಿಂಗ್ ಬಯೋಟೆಕ್ನಾಲಜಿಯಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ. ಇವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪದವಿ ಪ್ರಮಾಣಪತ್ರ ಮತ್ತು ಚಿನ್ನದ ಪದಕವನ್ನು ಸ್ವೀಕರಿಸಿದರು. ಪಿ.ಎಂ.ಕೌಶಿಕ್ ಕನ್ನಂಡಬಾಣೆಯ ಪಾಂಡೀರ ಮಹೇಶ ಹಾಗೂ ರಾಧ ದಂಪತಿ ಪುತ್ರ.










