ನಾಪೋಕ್ಲು ಮಾ.4 : ಇತಿಹಾಸ ಪ್ರಸಿದ್ಧ ಕಕ್ಕಬ್ಬೆ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ
ನಾಪೋಕ್ಲುವಿನ ಶೌರ್ಯ ಸದಸ್ಯರಿಂದ ಸ್ವಚ್ಛತಾ ಶ್ರಮದಾನ ನಡೆಯಿತು.
ಪಾಡಿ ಶ್ರೀ ಇಗ್ಗುತ್ತಪ್ಪ ಕ್ಷೇತ್ರದ ಹೂದೋಟಗಳಲ್ಲಿ ಬೆಳೆದಿದ್ದ ಕಳೆ ಸಸ್ಯಗಳನ್ನು ಕಿತ್ತು, ಹೂದೋಟವನ್ನು ಸ್ವಚ್ಛಗೊಳಿಸಲಾಯಿತು. ಅಲ್ಲದೇ ದೇವಸ್ಥಾನದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು, ಪ್ಲಾಸ್ಟಿಕ್ ಗಳನ್ನು ತೆರವುಗೊಳಿಸಿ ಶುಚಿಗೊಳಿಸಲಾಯಿತು.
ಸೇವಾ ಕಾರ್ಯದಲ್ಲಿ ಬಾಳೆಯಡ ದಿವ್ಯ, ಎನ್.ಬಿ.ದಿಲೀಶ್, ಬಿ.ಹೆಚ್.ಶಂಕರ್, ಉಮಾಲಕ್ಷ್ಮಿ, ಶ್ಯಾಮಲಾ, ಚಂದ್ರಕಲಾ, ಸರಸ್ವತಿ, ರವಿ, ರಾಹುಲ್ ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ.









