ಮಡಿಕೇರಿ ಮಾ.9 : ಭಾರತೀಯ ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗಿನ ಯುವತಿ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದ ಐನಂಡ ಡಾ.ಬಿ.ಕಾವೇರಮ್ಮ ಅವರು ಇದೀಗ ಬಡ್ತಿ ಹೊಂದಿ ಸ್ಕ್ವಾಡ್ರನ್ ಲೀಡರ್ ಆಗಿ ನೇಮಕಗೊಂಡಿದ್ದಾರೆ.
ಪ್ರಸ್ತುತ ಇವರು ಉತ್ತರ ಪ್ರದೇಶದ ವಾಯುನೆಲೆಗೆ ನಿಯುಕ್ತಿಗೊಂಡಿದ್ದಾರೆ. ಪೊನ್ನಂಪೇಟೆಯ ಐನಂಡ ಬೋಪಣ್ಣ ಹಾಗೂ ಭಾರತಿ ದಂಪತಿ ಪುತ್ರಿಯಾಗಿರುವ ಇವರು ಮುಕ್ಕಾಟಿರ ಭರತ್ ಬಿದ್ದಯ್ಯ ಅವರ ಪತ್ನಿ.









