ವಿರಾಜಪೇಟೆ ಮಾ.11 : ವಿರಾಜಪೇಟೆ ಸಮೀಪದ ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವರ ವಾರ್ಷಿಕ ಹಬ್ಬವು ಮಾ.15 ರಿಂದ 20 ರವರಗೆ ನಡೆಯಲಿದ್ದು, ಮಾ.18 ರಂದು ದೊಡ್ಡ ಹಬ್ಬ ನಡೆಯಲಿ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ವಾಟೆರೀರ ಪೂವಯ್ಯ ತಿಳಿಸಿದ್ದಾರೆ.
ಮಾ.15 ರಂದು ಸಂಜೆ ನಾಲ್ಕು ಗಂಟೆಗೆ ಕುಂದಿರ ಐನ್ ಮನೆಯಿಂದ ಭಂಡಾರ ಬರುವುದು, ಸಂಜೆ 7 ಗಂಟೆಗೆ ಕೊಡಿಮರ ನಿಲ್ಲಿಸುವುದು, ರಾತ್ರಿ 8 ಗಂಟೆಗೆ ಮಹಾಪೂಜೆ ನಂತರ ಅನ್ನದಾನ ನಡೆಯಲಿದೆ.
ಮಾ.16 ರಂದು ಬೆಳಿಗ್ಗೆ 11 ಗಂಟೆಗೆ ನಾಗದೇವಾಲಯದಲ್ಲಿ ವಿಶೇಷ ಪೂಜೆ, ಅಪರಾಹ್ನ ಅನ್ನದಾನ ನಡೆಯಲಿದೆ. ರಾತ್ರಿ 8 ಗಂಟೆಗೆ ಕಾಪು, ನಂತರ ಮಹಾಪೂಜೆ ಬಳಿಕ ಅನ್ನದಾನ ನಡೆಯಲಿದೆ.
ಮಾ.17 ರಂದು 11 ಗಂಟೆಗೆ ಮಕ್ಕಾಟ್ ಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ಅನ್ನದಾನ ನಡೆಯಲಿದೆ. ರಾತ್ರಿ 8 ಗಂಟೆಗೆ ಇರ್ ಬೊಳಕ್ ಮಹಾಪೂಜೆ, ಬಳಿಕ ಅನ್ನದಾನ ನಡೆಯಲಿದೆ.
ಮಾ.18 ರಂದು ದೊಡ್ಡ ಹಬ್ಬ ನಡೆಯಲಿದ್ದು, ಅಪರಾಹ್ನ 12ಕ್ಕೆ ನೆರಪು, ಎತ್ತ್‍ಪೋರಾಟ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು. ನಂತರ ಅಪರಾಹ್ನ 1 ಗಂಟೆಗೆ ಮಹಾಪೂಜೆ ನಂತರ ಅನ್ನದಾನ ನಡೆಯಲಿದೆ. ಬಳಿಕ ಅಪರಾಹ್ನ 3 ಗಂಟೆಗೆ ದೇವರು ಹೊರಗೆ ಬರುವುದು ಬಳಿಕ ಸಂಜೆ 6 ಗಂಟೆಗೆ ದೇವರ ಮೆರವಣಿಗೆ ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ನಡೆಯಲಿದೆ.
ವಿಶೇಷವಾಗಿ ವಿರಾಜಪೇಟೆ ಜೈನರ ಬೀದಿಯ ಬಸವೇಶ್ವರ ದೇವಾಲಯದಲ್ಲಿ ಪೂಜೆ ನಂತರ ಗಡಿಯಾರ ಕಂಬದ ಬಳಿ ಕೃಷ್ಣ ಸ್ಟೋರ್ ಸಮೀಪ ಪೂಜೆ ನಂತರ ದೇವಾಂಗ ಬೀದಿಯ ಜೇನು ಮೇಣ ಸಹಕಾರ ಸಂಘದ ಬಳಿಯ ಪಾರ್ವತಿ ದೇವಾಲಯದಲ್ಲಿ ಪೂಜೆ ಬಳಿಕ ದೇವರು ಮತ್ತೆ ದೇವಾಲಯಕ್ಕೆ ರಾತ್ರಿ 10 ಗಂಟೆಗೆ ಹಿಂತಿರುಗಲಿದ್ದು ಮಲೆಮಹಾದೇಶ್ವರ ದೇವಾಲಯದಲ್ಲಿ ಪೂಜೆ ನಡೆಯಲಿದೆ.
ಮಾ 19.ರಂದು ಅಪರಾಹ್ನ 12 ಗಂಟೆಗೆ ಮಹಾಪೂಜೆ ಮತ್ತು ಅನ್ನದಾನ ನಡೆಯಲಿದ್ದು, ಸಂಜೆ 6 ಗಂಟೆಗೆ ದೇವರ ಜಳಕ ಅವಭೃತ ಸ್ನಾನ, ರಾತ್ರಿ 8 ಗಂಟೆಗೆ ದೇವರ ನೃತ್ಯ ಮತ್ತು ನಂತರ ಅನ್ನದಾನ ನಡೆಯಲಿದೆ.
ಮಾ.20 ರಂದು ಬೆಳಿಗ್ಗೆ 11ಕ್ಕೆ ಕೊಡಿಮರ ಇಳಿಸುವುದು (ಕಳಮಡಕವೊ) ಅಪರಾಹ್ನ 12 ಗಂಟೆಗೆ ಮಹಾಪೂಜೆ ಮತ್ತು ಅನ್ನದಾನ ನಡೆಯಲಿದೆ.
ವಾರ್ಷಿಕೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸುವಂತೆ ವಾಟೆರೀರ ಪೂವಯ್ಯ ಕೋರಿದ್ದಾರೆ.
ಈ ಸಂದರ್ಭ ದೇವಾಲಯದ ತಕ್ಕರಾದ ಕೊಳವಂಡ ಕಾರ್ಯಪ್ಪ, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್, ಸಹಕಾರ್ಯದರ್ಶಿ ಚೋಕಂಡ ರಮೇಶ್ ಮತ್ತು ಖಜಾಂಚಿ ಚಾರಿಮಂಡ ಗಣಪತಿ ಉಪಸ್ಥಿತರಿದ್ದರು.
Breaking News
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*
- *ಮಿಸ್ಟಿ ಹಿಲ್ಸ್ ನಿಂದ ಮಕ್ಕಳಿಗೆ ಸಾಹಸಕ್ರೀಡೆ*
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*
- *ವೀರ ಸೇನಾನಿಗಳಿಗೆ ಅಗೌರವ : ಆಮ್ ಆದ್ಮಿ ಪಾರ್ಟಿ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ*
- *ವಿರಾಜಪೇಟೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಿಂದ ಸ್ಥಳ ಪರಿಶೀಲನೆ*
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*