ಮಡಿಕೇರಿ ಮಾ.16 : ನೆಲ್ಯಹುದಿಕೇರಿಯ ಪುರಾತನ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವವು ಮಾ.19, 20 ಹಾಗೂ 21 ರಂದು ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿದೆ.
ಮಾ.19 ರಂದು ಪ್ರಾತಕಾಲ 6.30 ರಿಂದ ಗಣಹೋಮ ಉತ್ಸವ ಪ್ರಾರಂಭವಾಗಲಿದೆ.
ಬೆಳಿಗ್ಗೆ 11 ಗಂಟೆಗೆ ಹಾಸನ ಮಹಾಸಂಸ್ಥಾನ ಮಠ ಹಾಗೂ ಕೊಡಗು ಶಾಖಾ ಮಠದ ಗುರುಗಳಾದ ಶ್ರೀ ಶಂಭುನಾಥ ಸ್ವಾಮಿಜಿ ಅವರು ಶ್ರೀ ಸತ್ಯನಾರಾಯಣ ದೇವಾಲಯಕ್ಕೆ ಕಳಸ ಮೆರವಣಿಯೊಂದಿಗೆ ಆಗಮಿಸಲಿದ್ದು, ಶ್ರೀಗಳ ದೃಷ್ಟಿ ತೆಗೆಯುವುದು, ದೇವಾಲಯದ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರವೇಶ ಮೆಟ್ಟಿಲಿನ ಉದ್ಘಾಟನೆ, ದೇವಾಲಯ ಪ್ರದಕ್ಷಣೆ, ದೇವರ ಕ್ಷೇತ್ರದಲ್ಲಿ ಜ್ಯೋತಿ ಬೆಳಗುವ ಕಾರ್ಯಕ್ರಮ, ದೇವತ ಪ್ರಾರ್ಥನೆ ಹಾಗೂ ಶ್ರೀ ಸತ್ಯನಾರಾಯಣ ದೇವರಿಗೆ ಪಂಚಾಮೃತ ಅಭಿಷೇಕ ಜರುಗಲಿದೆ.
ನಂತರ ಗುರುಗಳ ಪಾದ ಪೂಜೆ, ಗುರುಕಾಣಿಕೆ, ಗುರುಗಳಿಂದ ಪ್ರವಚನ, ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6.30 ಗಂಟೆಗೆ ತಕ್ಕರ ಮನೆಯಿಂದ ಭಂಡರಾ ಇಳಿಸುವುದು, 7 ಗಂಟೆಗೆ ದೇವತಾ ಪ್ರಾರ್ಥನೆ, ದೇವರ ಬಲಿ ಬರುವುದು, ಮಹಾಪೂಜೆ ನಂತರ ಅನ್ನಸಂತರ್ಪಣೆ ನೆರವೇರಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರಿ ಸತ್ಯನಾರಾಯಣ ದೇವರ ತೀರ್ಥ ಪ್ರಸಾದ ಸ್ವೀಕರಿಸುವಂತೆ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.