ಮಡಿಕೇರಿ ಮಾ.17 : ವಿವೇಕಾನಂದ ಯೂತ್ ಮೂಮೆಟ್, ವನವಾಸಿ ಕಲ್ಯಾಣ ಕೊಡಗು, ಬಾಳೆಲೆ ಗ್ರಾ. ಪಂ ವತಿಯಿಂದ ಬಾಳೆಲೆ ವ್ಯಾಪ್ತಿಯ ಗಿರಿಜನ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
ಬಾಳೆಲೆ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 21 ಮಂದಿ ಗಿರಿಜನ ಗರ್ಭಿಣಿ ಮಹಿಳೆಯರಿಗೆ ಸೀಮಂತರ ಮಾಡಲಾಯಿತು.
ಈ ಸಂದರ್ಭ ಬಾಳೆಲೆ ಗ್ರಾ.ಪಂ ಅಧ್ಯಕ್ಷ ಪೊಡಮಾಡ ಸುಖೇಶ್ ಭೀಮಯ್ಯ ಮಾತನಾಡಿ, ಮುಂದಿನ ಪೀಳಿಗೆಗೆ ಆಧಾರ ಸ್ತಂಭಗಳಾದ ಗರ್ಭಿಣಿ ಸ್ತ್ರೀಯರು ಉತ್ತಮ ಆರೋಗ್ಯಕರ ಪದ್ಧತಿಯನ್ನು ರೂಢಿಸಿಕೊಂಡು ಮಗುವಿನ ಆರೋಗ್ಯದ ಕಡೆ ಗಮನಹರಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ಮುಕ್ಕಾಟಿರ ಜಾನಕಿ, ತಾಲೂಕು ಶಿಸು ಕಲ್ಯಣ ಅಭಿವೃದ್ಧಿ ಅಧಿಕಾರಿ ರಾಜೇಶ್, ಮಹಿಳಾ ಆರೋಗ್ಯ ಪರಿವೀಕ್ಷಕರಾದ ಕಾವೇರಮ್ಮ, ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಶೋಕ್ ಕುಮಾರ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಂತೋಷ್, ಸ್ವಾಮಿ ವಿವೇಕಾನಂದ ಯೂತ್ ಮೂಮೆಟ್ ಕಾರ್ಯಕ್ರಮ ವ್ಯವಸ್ಥಾಪಕರಾದ ಕುಸುಮ, ಮೇಲ್ವಿಚಾರಕರಾದ ಶ್ರತೇಶ್, ಪ್ರಮುಖರಾದ ಪಡಿಞರಂಡ ಪ್ರಭುಕುಮಾರ್, ಅಂಗನವಾಡಿ ಕಾರ್ಯಕರ್ತೆಯರು ಆಶಾಕಾರ್ಯಕರ್ತೆಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.









