ಮಡಿಕೇರಿ ಮಾ.18 : ಕೊಡಗಿನ ಇಬ್ಬರು ಶಾಸಕರನ್ನು ಹಾಡಿ ಹೊಗಳಿದ ಬಸವರಾಜ ಬೊಮ್ಮಾಯಿ ಇವರು ಜನಪ್ರಿಯ ಶಾಸಕರು ಎನ್ನುವುದಕ್ಕಿಂತ ಜನಪಯೋಗಿ ಶಾಸಕರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.
ಬೆಂಗಳೂರಿಗೆ ಬಂದಾಗ ಜಿಲ್ಲೆಯ ಕಡತಗಳನ್ನು ನನ್ನ ಬಳಿಗೆ ತಂದು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಯೇ ಮರಳುತ್ತಿದ್ದರು. ಇವರುಗಳಿಗೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇದೆ, ಇನ್ನು ಮುಂದೆಯೂ ಇವರಿಬ್ಬರ ಮೇಲೆ ನಿಮ್ಮ ಆಶೀರ್ವಾದವಿದ್ದರೆ ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದು ಮತ್ತು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು.









