ಕಡಂಗ ಮಾ.20: ಅರಪಟ್ಟು ಗ್ರಾಮದಲ್ಲಿರುವ ಪುರಾತನ ದೇವಾಲಯ ಶ್ರೀ ಪಟ್ಟೋಟು ಉಮಾ ಮಹೇಶ್ವರ ದೇವರ ಪ್ರತಿಷ್ಠ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಉತ್ಸವದ ಅಂಗವಾಗಿ ಸಾಮೂಹಿಕ ರುದ್ರಾಭಿಷೇಕ ಹಾಗೂ ಮಹಾ ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ವಿದ್ಯಾಧರ್ ಭಟ್ ಹಾಗೂ ತಂಡದವರು ನೆರವೇರಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ನೆರಪಂಡ ಚಿತ್ರ ಬೆಳ್ಯಪ್ಪ ಹಾಗೂ ಸಮಿತಿ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ವಿಧಿಗಳಲ್ಲಿ ಭಾಗವಹಿಸಿದರು.
ನಂಬಿಯಪ0ಡ ದಿವಂಗತ ಪೂವಯ್ಯ ಜ್ಞಾಪಕಾರ್ಥವಾಗಿ ಅವರ ಮಕ್ಕಳು ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇಸಿದರು.
ವರದಿ : ನೌಫಲ್ ಕಡಂಗ










